ಮೋದಿ ಸಿನೆಮಾ ವೀಕ್ಷಿಸಿ: ಚುನಾವಣೆ ಆಯೋಗಕ್ಕೆ ಸುಪ್ರೀಂ ಸೂಚನೆ

ಮೋದಿ ಸಿನೆಮಾ ವೀಕ್ಷಿಸಿ: ಚುನಾವಣೆ ಆಯೋಗಕ್ಕೆ ಸುಪ್ರೀಂ ಸೂಚನೆ

ನವದೆಹಲಿ, ಏ. 16, ನ್ಯೂಸ್ ಎಕ್ಸ್ ಪ್ರೆಸ್:  ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಕುರಿತ ಪಿಎಂ ಮೋದಿ ಸಿನಿಮಾವನ್ನು ಪೂರ್ಣವಾಗಿ ವೀಕ್ಷಿಸಿ ತನ್ನ ನಿರ್ಧಾರವನ್ನು ಮೊಹರು ಮಾಡಿದ್ದ ಲಕೋಟೆಯಲ್ಲಿ ತನಗೆ ತಿಳಿಸುವಂತೆ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಇಂದು ಸೂಚನೆ ನೀಡಿದೆ. ಭಾರತದಾದ್ಯಂತ ಬಿಡುಗಡೆಯಾಗುವುದಕ್ಕೂ ಮುನ್ನ ಪಿಎಂ ನರೇಂದ್ರ ಮೋದಿ ಚಿತ್ರದ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಈ ಚಿತ್ರವನ್ನು ಪೂರ್ಣವಾಗಿ ವೀಕ್ಷಿಸಿ ತನ್ನ ನಿರ್ಧಾರವನ್ನು ಏ.19ರೊಳಗೆ ತಿಳಿಸುವಂತೆ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಚಿತ್ರ ನಿರ್ಮಾಪಕರ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೊಹಟಗಿ ಚುನಾವಣಾ ಆಯೋಗ ಪ್ರೋಮೋಗಳನ್ನು ನೋಡಿ ಈ ಚಿತ್ರದ ಮೇಲೆ ನಿಷೇಧ ಹೇರಿದೆ. ಆದರೆ, ಪೂರ್ಣ ಚಿತ್ರವನ್ನು ನೋಡಿಲ್ಲ ಎಂದು ವಾದಿಸಿದ್ದರು. ಈ ಅಂಶ ಪರಿಗಣಿಸಿದ ಕೋರ್ಟ್ ಚುನಾವಣಾ ಆಯೋಗಕ್ಕೆ ಈ ಸೂಚನೆ ನೀಡಿದೆ. ಏ.22ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

ಫ್ರೆಶ್ ನ್ಯೂಸ್

Latest Posts

Featured Videos