ಬೆಂಗಳೂರು ಬಂದ್ ಗೆ ಶಾಸಕ ಸತೀಶ್ ರೆಡ್ಡಿ ಬಾಗಿ

ಬೆಂಗಳೂರು ಬಂದ್ ಗೆ ಶಾಸಕ ಸತೀಶ್ ರೆಡ್ಡಿ ಬಾಗಿ

ಬೆಂಗಳೂರು: ಇಂದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕಾವೇರಿಯ ಕಿಚ್ಚು ಹೆಚ್ಚಾಗಿದ್ದು ಬೆಂಗಳೂರು ನಗರದಾದ್ಯಂತ ಬಂದಿಗೆ ಕರೆ ನೀಡಲಾಗಿತ್ತು.

ಇನ್ನು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಬೊಮ್ಮನಹಳ್ಳಿ ಶಾಸಕರಾದ ಸತೀಶ್ ರೆಡ್ಡಿ ಅವರ ನೇತೃತ್ವದಲ್ಲಿ ಹೊಸೂರು ರಸ್ತೆಯ ಬೊಮ್ಮನಹಳ್ಳಿ ಸರ್ಕಲ್ ನಲ್ಲಿ  ಇಂದು ಖಾಲಿ ಕೂಡ ಹಾಗೂ ಬಿಂದಿಗೆಗಳನ್ನು ಹಿಡಿದು ಪ್ರತಿಭಟನೆ ಮಾಡಿ ರಾಜ್ಯ  ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವನ್ನು ಖಂಡಿಸಿ ಬೊಮ್ಮನಹಳ್ಳಿ ವೃತ್ತ ದಲ್ಲಿ ಬೆಂಗಳೂರು ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲಾ ವಾರ್ಡ್ ಮಟ್ಟದಲ್ಲಿನ ಕಾರ್ಯಕರ್ತರು ಕನ್ನಡ ಪರ ಹೋರಾಟಗಾರರು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಶಾಂತ ರೀತಿಯಿಂದ ಬಂದ್ ನಡೆಸಲಾಯಿತು.

ಇಂದು ನಾವು ಬೆಂಗಳೂರಿನ ಜನ ಕಾವೇರಿ ನ ನೀರಿನ ಮೇಲೆ ಅವಲಂಬವಾಗಿರುವುದರಿಂದ ನಾವು ಕಾವೇರಿ ಗೋಸ್ಕರ ಹೋರಾಟ ಮಾಡೇ ಮಾಡುತ್ತೇವೆ ಮತ್ತು ರೈತರ ಬೆಂಬಲಕ್ಕೆ ನಾವೆಂದು ಸಿದ್ಧವಾಗಿರುತ್ತೇವೆ ಎಂದು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ಸತೀಶ್ ರೆಡ್ಡಿ ಅವರು ಇಂದು ಬಂದಿಗೆ ಸಾತ್ ನೀಡಿದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಒಲೈಸಲು ಕಾಂಗ್ರೆಸ್ ಇದೀಗ ಕಾವೇರಿ ನೀರನ್ನು ಬಿಡುಗಡೆ ಮಾಡಲು ಒಳ ಒಪ್ಪಂದವನ್ನು ಮಾಡಿಕೊಂಡಿದೆ. ದುರಾದೃಷ್ಟಕರ ಕಾಂಗ್ರೆಸ್ ಪಕ್ಷ ಕನ್ನಡಿಗರನ್ನು, ಕರ್ನಾಟಕ ರೈತರನ್ನು, ಬೆಂಗಳೂರು ವಾಸಿಗರನ್ನು ಮೋಸ ಮಾಡಿ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣವನ್ನು ಮುಂದುವರಿಸುತ್ತಿದೆ. ಕಾವೇರಿ ನೀರನ್ನು ಯಾವುದೇ ಕಾರಣಕ್ಕೆ ಬಿಡುಗಡೆ ಮಾಡಬಾರದೆಂದು ಪ್ರತಿನಿತ್ಯ ಹೋರಾಟ ಮಾಡಲು ಬಿಜೆಪಿ ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರು ನಿರಂತರ ಹೋರಾಟ ಮಾಡಲು ಸಿದ್ದ ಎಂದರು.

ಕಾವೇರಿ ನೀರಿಗಾಗಿ ಪಕ್ಷ ಭೇದವನ್ನು ಮರೆತು ಕೇವಲ ಜನರ ಹಿತ ದೃಷ್ಟಿಯಿಂದ ಬೆಂಬಲ ಕೊಡಲು ನಾವು ಸಿದ್ದ. ಕಾಂಗ್ರೆಸ್ ಸರ್ಕಾರಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲುತ್ತವೆ. ಆದ್ದರಿಂದ ಯಾವುದೇ ಕಾರಣಕ್ಕೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದೆಂದು ಒತ್ತಾಯಿಸುತ್ತೇವೆ ಎಂದು ಸತೀಶ್ ರೆಡ್ಡಿ ತಿಳಿಸಿದರು.

ಈ ಸಂದರ್ಬದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಮಂಜುನಾಥ ರೆಡ್ಡಿ ರವರು, ಶ್ರೀನಿವಾಸ ರೆಡ್ಡಿ ರವರು, ಮಂಡ್ಯ ಜಿಲ್ಲೆಯ ಇಂಡ್ಲವಾಡು ಸಚ್ಚಿದಾನಂದ ರವರು ಮಂಡಲ ಅಧ್ಯಕ್ಷರಾದ ಶಿವಾಜಿ ರವರು, ಹಾಗೂ ಎಲ್ಲಾ ವಾರ್ಡ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos