ಸ್ಯಾನಿಟೈಸರ್ ಯಂತ್ರ ವಿತರಣೆ

  • In State
  • August 5, 2020
  • 187 Views
ಸ್ಯಾನಿಟೈಸರ್ ಯಂತ್ರ ವಿತರಣೆ

ಮಾಲೂರು:ಸರ್ಕಾರಿ ಕಚೇರಿಗಳಿಗೆ ಗ್ರಾಮೀಣ ಭಾಗದ ಜನತೆ ಹಾಗೂ ಸಾರ್ವಜನಿಕರು  ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಬರುತ್ತಿದ್ದು, ಕೊರೋನಾ ಭೀತಿ ಹೆಚ್ಚಾಗಿರುವುದರಿಂದ ಸಂಜೀವಿನಿ ಚಾರಿಟಬಲ್ ಟ್ರಸ್ಟ್ ವತಿಯಿಂದ ೨೮ ಗ್ರಾ.ಪಂ ಮತ್ತು ಸರ್ಕಾರಿ ಕಚೇರಿಗಳಿಗೆ ಸೆನ್ಸಾರ್ ಸ್ಯಾನಿಟೈಸರ್ ಯಂತ್ರಗಳನ್ನು ಅಳವಡಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಂಡು  ಕೊರೋನಾ ಮುಕ್ತಿಗೆ ಸಹಕರಿಸಬೇಕೆಂದು ಸಂಜೀವಿನಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಹೂಡಿ ವಿಜಯ್‌ಕುಮಾರ್ ತಿಳಿಸಿದರು .

ಪಟ್ಟಣದ ಹೊರವಲಯದ ಚೊಕ್ಕಂಡನಹಳ್ಳಿ ಗೇಟ್ ಬಳಿ ಇರುವ ಸಂಜೀವಿನಿ ಚಾರಿಟಬಲ್ ಟ್ರಸ್ಟ್ನ ಕಚೇರಿಯಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ರಕ್ಷಾ ಬಂಧನ ಹಾಗೂ ತಾಲ್ಲೂಕಿನ ೨೮ ಗ್ರಾಮ ಪಂಚಾಯಿತಿ ಕಾರ್ಯಾಲಯಗಳಿಗೆ ಉಚಿತವಾಗಿ ಸೆನ್ಸಾರ್ ಸ್ಯಾನಿಟೈಸರ್ ಯಂತ್ರಗಳನ್ನು ವಿತರಿಸಿ  ಮಾತನಾಡಿದರು .

ದೇಶ ಮತ್ತು ರಾಜ್ಯದಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದೇ ರೀತಿ ತಾಲ್ಲೂಕಿನಲ್ಲಿಯೂ ಕೊರೋನ ಸೋಂಕಿತರ ಸಂಖ್ಯೆ ಉಲ್ಬಣವಾಗುತ್ತಿದೆ. ಈಗಾಗಲೇ ಸಂಜೀವಿನಿ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾಲ್ಲೂಕಿನ  ಹೆಚ್ಚಾಗಿ ಸಾರ್ವಜನಿಕರು ಸೇರುವ ಪ್ರದೇಶಗಳಾದ  ದೇವಾಲಯಗಳು, ಪೊಲೀಸ್ ಠಾಣೆ, ತಾಲ್ಲೂಕು ಕಚೇರಿ, ನಾಡ ಕಚೇರಿ, ಆಸ್ಪತ್ರೆಗಳು  ಸೇರಿದಂತೆ ಅವಶ್ಯಕತೆ ಇರುವ  ಸ್ಥಳಗಳಿಗೆ  ಸೆನ್ಸಾರ್ ಸ್ಯಾನಿಟೈಸರ್ ಯಂತ್ರಗಳನ್ನು  ವಿತರಿಸಿದ್ದು, ಗ್ರಾಮೀಣ ಭಾಗದ ಜನರು ಮತ್ತು ಅಧಿಕಾರಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಾಲ್ಲೂಕಿನ ೨೮ ಗ್ರಾಮ ಪಂಚಾಯಿತಿಗಳಿಗೆ  ಪಕ್ಷದ ಮುಖಂಡರ  ಮೂಲಕ ಸೆನ್ಸಾರ್ ಸ್ಯಾನಿಟೈಸರ್ ಮಿಷನ್‌ಗಳನ್ನು   ಅಳವಡಿಸಲು  ಜವಾಬ್ದಾರಿ ನೀಡಲಾಗಿದ್ದು, ಮಹಾಮಾರಿ ಕೊರೋನ ತಡೆಗಟ್ಟಲು  ಸರ್ಕಾರ  ಹೊರಡಿಸಿರುವ  ನಿಯಮಗಳನ್ನು ಪಾಲಿಸಿ. ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಲು ಎಲ್ಲರೂ ಕೈ ಜೋಡಿಸಬೇಕೆಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ನಿಕಟಪೂರ್ವಅಧ್ಯಕ್ಷ ಬಿ.ಆರ್.ವೆಂಕಟೇಶ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸತೀಶ್‌ಆರಾಧ್ಯ, ಪುರಸಭಾ ಸದಸ್ಯ ಬಾನುತೇಜ, ಯೋಜನಾ ಪ್ರಾಧಿಕಾರದ ಸದಸ್ಯರಾದ ಎಂ.ಸಿ.ರವಿ, ಅಮರಾವತಿ, ಮುಖಂಡರಾದ  ಸುಬ್ರಮಣಿರೆಡ್ಡಿ, ಬಿಜೆಪಿಹನುಮಪ್ಪ, ನೋಟವೆ ವೆಂಕಟೇಶ್‌ಗೌಡ, ತಿಮ್ಮನಾಯಕನಹಳ್ಳಿ  ನಾರಾಯಣಸ್ವಾಮಿ, ಸಂತೆಹಳ್ಳಿ  ರಮೇಶ್, ಕೂರಿ ಮಂಜು,  ಶ್ರೀವಲ್ಲಿ , ಗೌರಿಶಂಕರ್, ಕೃಷ್ಣಪ್ಪ, ಲಕ್ಕಪ್ಪ,  ಗೋಪಾಲ್‌ಗೌಡ, ವೆಂಕಟೇಶ್, ಹುಳದೇನಹಳ್ಳಿ ವಿಶ್ವನಾಥ್‌ಗೌಡ,  ಅಂಗಡಿ ಗೋಪಾಲಪ್ಪ ಇನ್ನಿತರರು ಹಾಜರಿದ್ದರು .

ಫ್ರೆಶ್ ನ್ಯೂಸ್

Latest Posts

Featured Videos