ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ

ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ

ಬೆಂಗಳೂರು,  ಸೆ. 9:  ಮೋಟಾರು ಕಾಯ್ದೆ ಅನ್ವಯ ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ೫ ಕೋಟಿ ಕರ ಪತ್ರಗಳನ್ನು ಹಂಚಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.

ಮನೆಮನೆಗೆ ದಿನ ಪತ್ರಿಕೆಗಳ ಜೊತೆಗೆ ಕರ ಪತ್ರಗಳನ್ನು ಹಂಚಲಾವುದು. ಇದಲ್ಲದೆ, ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ಇನ್ನಿತರ ಮಾಧ್ಯಮಗಳು, ಇನ್ನಿತರ ಮಾಧ್ಯಮಗಳ ಮೂಲಕ ಸಂಚಾರ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸುವುದು ಎಂದರು.

ಸಂಚಾರ ನಿಯಲ ಉಲ್ಲಂಘನೆ ದುಬಾರಿ ದಂಡ ವಿಧಿಸುವ ಬಗ್ಗೆ ವಾಹನ ಸವಾರರು ಪ್ರತಿಭಟನೆ ನಡೆಸುತ್ತಿರುವ, ಬಗ್ಗೆ ತೀವ್ರ ಆಕ್ರೊÃಶ ವ್ಯಕ್ತ ಪಡಿಸಿದ ಅವರು, ಸಮಯ ಉಲ್ಲಂಘನೆ ಮಾಡಿದಿದ್ದರೆ, ಏಕೆ ದಂಡ ಬೀಳುತ್ತದೆ ಎಂದು ಪ್ರಶ್ನಿಸಿದರು. ನಗರದಲ್ಲಿನ ರಸ್ತೆ ಹಾಗೂ ಸಂಚಾರ ಶಿಸ್ತು ತರಲು ದುಬಾರಿ ದಂಡ ವಿಧಿಸುವುದು ಅನಿವಾರ್ಯವಾಗಿದೆ. ದುಬಾರಿ ದಂಡದಿಂದ ರಾಜ್ಯ ಬೊಕ್ಕಸ  ತುಂಬ ಬೇಕಾದ ಅಗತ್ಯವಿಲ್ಲ. ಕಾನೂನು ಎಲ್ಲರೂ  ಗೌರವ  ನೀಡಬೇಕಾಗುತ್ತದೆ ಎಂದರು. ಸಂಚಾರ ನಿಯಮ ಉಲ್ಲಂಘಿಸಿ ಏಕೆ ದಂಡ ಕಟ್ಟುತ್ತಿÃರ? ಎಂದು ವಾಹನ ಸವಾರರು ಪ್ರಶ್ನಿಸಿದ ಅವರು, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ತಮ್ಮ ಜೀವನ ಅಪಾಯ ಹಾಗೂ ಬೇರೊಬ್ಬರ ಜೀವಕ್ಕೆ ತರುವುದುದನ್ನು ತಡೆಗಟ್ಟಿ ಎಂದು ಸಲಹೆ  ಮಾಡಿದರು

ಫ್ರೆಶ್ ನ್ಯೂಸ್

Latest Posts

Featured Videos