ರೋಹಿತ್ ಮೊತ್ತೊಂದು ಶತಕ

ರೋಹಿತ್ ಮೊತ್ತೊಂದು ಶತಕ

ಬೆಂಗಳೂರು, ಅ. 19: ರಾಂಚಿಯ ಜೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಮೂರನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅಬ್ಬರಿಸುತ್ತಿದ್ದಾರೆ. 3 ವಿಕೆಟ್ ಕಳೆದುಕೊಂಡ ಭಾರತಕ್ಕೆ ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಆಸರೆಯಾಗಿ ನಿಂತಿದ್ದು, ಹಿಟ್ಮ್ಯಾನ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತಕ್ಕೆ ಆರಂಭಿಕ ಆಘಾತ ಉಂಟಾಯಿತು. ಮಯಾಂಕ್ ಅಗರ್ವಾಲ್ 10 ರನ್ ಗಳಿಸಿ ರಬಾಡ ಬೌಲಿಂಗ್ನಲ್ಲಿ ಔಟ್ ಆದರೆ, ಬಂದ ಬೆನ್ನಲ್ಲೆ ಚೇತೇಶ್ವರ್ ಪೂಜಾರ ಸೊನ್ನೆ ಸುತ್ತಿದರು. ನಾಯಕ ವಿರಾಟ್ ಕೊಹ್ಲಿ ಕೂಡ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲದೆ 12 ರನ್ ಗಳಿಸಿರುವಾಗ ಎಲ್ಬಿ ಬಲೆಗೆ ಸಿಲುಕಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಒಂದಾದ ರೋಹಿತ್ ಶರ್ಮಾ ಜೊತೆ ಉಪ ನಾಯಕ ಅಜಿಂಕ್ಯ ರಹಾನೆ ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದಾರೆ. ದ್ವಿಶತಕದ ಜೊತೆಯಾಟದತ್ತ ದಾಪುಗಾಲಿಡುತ್ತಿದ್ದಾರೆ. ಈ ನಡುವೆ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ 6ನೇ ಶತಕ ಪೂರೈಸಿದ್ದಾರೆ. 130 ಎಸೆತಗಳಲ್ಲಿ 13 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ ರೋಹಿತ್ ಶತಕ ಬಾರಿಸಿದರು. ಇತ್ತ ರಹಾನೆ ಕೂಡ ಶತಕದತ್ತ ಹೆಜ್ಜೆ ಹಾಕುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos