ರೆಡ್ಡಿಗೆ ಜಮ್ಮೀರ ಸವಾಲ್

ರೆಡ್ಡಿಗೆ ಜಮ್ಮೀರ ಸವಾಲ್

ಬಳ್ಳಾರಿ, ಜ. 13 : ಉಫ್ ಅಂದ್ರೆ ಯಾರೋ ಹಾರೋಗ್ತರೆ ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದ್ದರು. ಖಡ್ಗ ತಂದರೆ ಏನಾಗುತ್ತದೆ ಎಂದಿದ್ದರು. ಈಗ ಬಂದಿದ್ದೀನಿ ಬಾರೋ. ಎಲ್ಲಿದೆ ನಿನ್ನ ಖಡ್ಗ ಎಂದು ಶಾಸಕ ಜಮೀರ್ ಅಹ್ಮದ್ ಸವಾಲು ಹಾಕಿದರು.
ನಗರಕ್ಕೆ ಸೋಮವಾರ ಬೆಂಬಲಿಗರೊಂದಿಗೆ ಬಂದು ಸುದ್ದಿಗಾರರೊಂದಿಗೆ ಮಾತನಾಡಿ, ‘ನಾವು ಶಾಂತಿ ಭಂಗ ಮಾಡುವುದಿಲ್ಲ. ನಮ್ಮನ್ನು ಬಂಧಿಸುವುದಾದರೆ ಬಂಧಿಸಲಿ. ಗುಂಡು ಹೊಡೆಯುವುದಾದರೆ ಹೊಡೆಯಲಿ ಎಂದರು.
‘ನಾವೇನೂ ಸುಮ್ಮನೇ ನಮ್ಮಷ್ಟಕ್ಕೇ ಬಂದಿಲ್ಲ. ರೆಡ್ಡಿ ಅವರ ಹೇಳಿಕೆ   ಹಿನ್ನೆಲೆಯಲ್ಲಿ ಬಂದಿರೋದು. ಕಾಂಗ್ರೆಸ್ ಪಕ್ಷದ ವತಿಯಿಂದ ಬಂದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಇಡೀ ದೇಶದಲ್ಲೇ ಪ್ರತಿಭಟನೆ ನಡೆದಿದೆ. ಅದಕ್ಕೆ ಕಾಂಗ್ರೆಸ್ ಪಕ್ಷದ ಅನುಮತಿ ತಗೋಬೇಕಾಗಿಲ್ಲ’ಎಂದು ಪ್ರತಿಪಾದಿಸಿದರು. ನಗರದ ಕಂಟ್ರಿ ಕ್ಲಬ್ ಬಳಿಯೇ ಪೊಲೀಸರು ಜಮೀರ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಅಹಂಬಾವಿ ಪ್ರದೇಶದಲ್ಲಿರುವ ರೆಡ್ಡಿ ಅವರ ಮನೆ ಮುಂದೆ ಧರಣಿ ನಡೆಸುವ ಜಮೀರ್ ಅಹ್ಮದ್ ಅವರ ಉದ್ದೇಶ ಈಡೇರಲಿಲ್ಲ. ಸ್ಥಳೀಯ ಕಾಂಗ್ರೆಸ್ ಮುಖಂಡರ ಬೆಂಬಲ ಇಲ್ಲದಿದ್ದುದರಿಂದ ಜಮೀರ್ ಅವರ ಬೆಂಬಲಿಗರು ಬೇರೆ ಊರುಗಳಿಂದ ಬಂದಿದ್ದರು.
ಪ್ರತಿಭಟಿಸಿದರು. ಅವರನ್ನು ಬಲವಂತವಾಗಿ ದಾಟಿಕೊಂಡೇ ವಾಹನ ಮುಂದಕ್ಕೆ ಹೋಯಿತು.
ಜ.3ರಂದು ನಗರದಲ್ಲಿ ದೇಶ ಭಕ್ತ ನಾಗರಿಕರ ವೇದಿಕೆಯು ಕಾಯ್ದೆ ಬಗ್ಗೆ ಏರ್ಪಡಿಸಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದ್ದ ರೆಡ್ಡಿ, ಪ್ರಚೋದನಕಾರಿ ಭಾಷಣ ಮಾಡಿ, ಮುಸ್ಲಿಮರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಎಸ್ಪಿ ಸಿ.ಕೆ.ಬಾಬಾ ಅವರಿಗೆ ಮನವಿ ಸಲ್ಲಿಸಿದ್ದರು.
ಜಮೀರ್ ಅಹ್ಮದ್ ಅವರ ಧರಣಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿ ಶಾಸಕ ಕೆ.ಸಿ.ಕೊಂಡಯ್ಯ ಕೂಡ ಬಹಿರಂಗ ಹೇಳಿಕೆ ನೀಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos