ರಶ್ಮಿಕಾ ಮಂದಣ್ಣ ಅವರ ಹೊಸ ಪೋಸ್ಟರ್

ರಶ್ಮಿಕಾ ಮಂದಣ್ಣ ಅವರ ಹೊಸ ಪೋಸ್ಟರ್

ಬೆಂಗಳೂರು: ನಮ್ಮ ಸ್ಯಾಂಡಲ್ ವುಡ್ ನಲ್ಲಿ ಕಿರಿಕ್ ಪಾರ್ಟಿ ಮೂಲಕ ರಶ್ಮಿಕಾ ಮಂದಣ್ಣ ಅವರು ಈಗ ಬಹುಭಾಷ ನಟಿಯಾಗಿದ್ದಾರೆ ಹಾಗೂ ಇವರನ್ನು ಅಭಿಮಾನಿಗಳು ಪ್ರೀತಿಯಿಂದ ನ್ಯಾಷನಲ್ ಕ್ರಶ್ ಎಂದು ಕರೆಯುತ್ತಾರೆ. ಸಿನಿಮಾ ರಂಗಕ್ಕೆ ಬಂದು ಸ್ವಲ್ಪ ವರ್ಷಗಳಲ್ಲಿ ಅತಿ ಹೆಚ್ಚು ಯಶಸ್ಸನ್ನು ಪಡೆದರು.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ‘ಗೃಹಿಣಿ’ ಪಾತ್ರದಲ್ಲಿ ಮಿಂಚುತ್ತಿರುವ ‘ಪೋಸ್ಟರ್‌’ ಒಂದನ್ನು ತಮ್ಮ ಸೋಷಿಯಲ್ ಮೀಡಿಯಾ ‘X’ ಮೂಲಕ ಹಂಚಿಕೊಂಡಿದ್ದಾರೆ. ಅವರ ಇಂದಿನ ಪೋಸ್ಟರ್ ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ತಮ್ಮ ಕೆರಿಯರ್‌ನಲ್ಲಿ ಇಲ್ಲಿಯವರೆಗೂ ಹೆಚ್ಚಾಗಿ ‘ಗ್ಲಾಮರ್ ರೋಲ್‌’ ನಿರ್ವಹಿಸಿದ್ದ ರಶ್ಮಿಕಾ, ಇದೀಗ ಅಪ್ಪಣ ‘ಗೃಹಿಣಿ ಲುಕ್‌’ನಲ್ಲಿ ಮಿಂಚುತ್ತಿದ್ದು, ಹಲವರು ಭಾರೀ ಮೆಚ್ಚುಗೆ ಸೂಚಿಸುತ್ತಿದ್ದಾರೆ. ತಮ್ಮ ಪೋಸ್ಟರ್ ಹಂಚಿಕೊಂಡು ರಶ್ಮಿಕಾ ‘ನಿಮ್ಮ ಗೀತಾಂಜಲಿ’ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಸಂದೀಪ್ ರೆಡ್ಡಿ ವಂಗ ನಿರ್ದೇಶನದ ‘ಅನಿಮಲ್’ ಚಿತ್ರದಲ್ಲಿ ನಾಯಕರಾಗಿ ಬಾಲಿವುಡ್ ನಟ ರಣಬೀರ್ ಕಪೂರ್ ನಟಿಸಿದ್ದಾರೆ. ನಾಯಕಿಯಾಗಿ ನಟಿಸುತ್ತಿರುವ ನಟಿ ರಶ್ಮಿಕಾ ಈ ಚಿತ್ರದಲ್ಲಿ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ಬಿಡುಗಡೆಯಾಗಿರುವ ಪೋಸ್ಟರ್‌ ಸಹ ರಶ್ಮಿಕಾರ ಲುಕ್ ಹೊಸ ರೀತಿಯಲ್ಲಿದೆ ಎಂಬುದಕ್ಕೆ ಸಾಕ್ಷಿ ನುಡಿಯುವಂತಿವೆ. ವೃತ್ತಿ ಜೀವನದಲ್ಲಿ ಗ್ಲಾಮರಸ್‌ ಆಗಿ ಹೆಚ್ಚಾಗಿ ಮಿಂಚಿದ್ದ ರಶ್ಮಿಕಾರ ಈ ಹೊಸ ಲುಕ್‌ ಬಗ್ಗೆ ಹೆಚ್ಚಿನ ಕುತೂಹಲ ಸೃಷ್ಟಿಯಾಗಿದೆ.
ಸಂದೀಪ್ ರೆಡ್ಡಿ ವಂಗ ನಿರ್ದೇಶಕರ ‘ಅನಿಮಲ್’ ಚಿತ್ರ ಸದ್ಯವೇ ತೆರೆಗೆ ಬರುತ್ತಿದ್ದು, ಇದರಲ್ಲೂ ನಾಯಕಿಗೆ ಹೆಚ್ಚಿನ ಪ್ರಾಶಸ್ತ್ಯ ಇರಲಿದೆ ಎಂಬ ಮಾತು ಕೇಳಿಬರುತ್ತಿದೆ. ಸುದ್ದಿ ನಿಜವಾಗಿದ್ದರೆ, ನಾಯಕಿ ರಶ್ಮಿಕಾ ಹಾಗೂ ಅವರ ಅಭಿಮಾನಿಗಳು ಹೆಚ್ಚಿನ ಸಂತೋಷ ಪಡುವುದು ಗ್ಯಾರಂಟಿ!

ಫ್ರೆಶ್ ನ್ಯೂಸ್

Latest Posts

Featured Videos