‘ರಮ್ಯಾ ಎಲ್ಲಿದ್ದೀಯಮ್ಮಾ’ ಎಂದು ಕಾಲೆಳೆದ ಶಿಲ್ಪಾ..!

‘ರಮ್ಯಾ ಎಲ್ಲಿದ್ದೀಯಮ್ಮಾ’ ಎಂದು ಕಾಲೆಳೆದ ಶಿಲ್ಪಾ..!

ಬೆಂಗಳೂರು, ಮೇ. 24, ನ್ಯೂಸ್ಎಕ್ಸ್ ಪ್ರೆಸ್‍ : ಮಾಜಿ ಸಂಸದೆ, ನಟಿ ರಮ್ಯಾಗೆ ಶಿಲ್ಪಾ ಗಣೇಶ ಟ್ವೀಟ್ ಮಾಡಿ ಕೆಣಕಿದ್ದಾರೆ.  ‘ರಮ್ಯಾ ಎಲ್ಲಿದಿಯಮ್ಮಾ? ಎಲ್ಲಿ ನಿಮ್ಮ ಅಧ್ಯಕ್ಷ ರಾಹುಲ್? ಎಲ್ಲಿ ನಿಮ್ಮ ಫೇಕ್ ಅಕೌಂಟ್ ಸೈನ್ಯ? ಎಲ್ಲಿ ನಿಮ್ಮ ತಲೆಬುಡವಿಲ್ಲದ ಟ್ವೀಟ್‌ಗಳು? ಎಲ್ಲೋಯ್ತು ನಿಮ್ಮ ಆಧಾರವಿಲ್ಲದ ಆರೋಪಗಳು? ಅದಕ್ಕೆ ಹೇಳೋದು ಇನ್ನೊಬ್ಬರ ಬಗ್ಗೆ ಆಪಾದನೆ ಮಾಡೋ ಮೊದಲು ತಮ್ಮ ಬಗ್ಗೆ ತಮಗೆ ತಿಳಿದಿರಬೇಕು’  ಎಂದು ಟ್ವೀಟ್ ಮಾಡಿದ್ದಾರೆ.

ನಟಿ ರಮ್ಯಾ ಇತ್ತೀಚೆಗೆ ಟ್ವಿಟ್ಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಲಕನ ಕಿವಿ ಹಿಂಡುತ್ತಿರುವುದನ್ನು ಹಿಟ್ಲರ್ ಗೆ ಹೋಲಿಸಿ ಒಂದು ಫೋಟೋವನ್ನು ಶೇರ್ ಮಾಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಬಹಳಷ್ಟು ವಿರೋಧಗಳು ವ್ಯಕ್ತವಾಗಿದ್ದವು.

 

ಫ್ರೆಶ್ ನ್ಯೂಸ್

Latest Posts

Featured Videos