ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಕಾರ್ಯಕರ್ತರಿಂದ ಪ್ರತಿಭಟನೆ

ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಕಾರ್ಯಕರ್ತರಿಂದ ಪ್ರತಿಭಟನೆ

ದೇವದುರ್ಗ : ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಲು ಹೊರಟಿರುವ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಚರ್ಚೆಗೆ ಒಳಪಡಸದೇ ನಿರ್ಧಾರ ತೆಗೆದುಕೊಂಡಿರುವುದು, ಶೈಕ್ಷಣಿಕ ಸಮುದಾಯಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ ಎಂದು ತಾಲ್ಲೂಕು ಕಾರ್ಯದರ್ಶಿ ಶಬ್ಬೀರ್ ಜಾಲಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿ ತಾಲ್ಲೂಕಿನ ಜಾಲಹಳ್ಳಿಯ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಸರ್ಕಲ್ ಬಳಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಖಂಡಿಸಿ ಸಿಪಿಐಎಂ ಸಂಘಟನೆಯಿಂದ ಹೋರಾಟ ಮಾಡಲಾಯಿತು .ರೈತರ ಕಾಯ್ದೆಗಳನ್ನು ಜಾರಿ ಮಾಡಿ ರೈತ ಸಮುದಾಯದ ಮಗ್ಗಲು ಮುರಿದಿದ್ದಲ್ಕದೇ, ಈಗ ಶೈಕ್ಷಣಿಕ ಕ್ಷೇತ್ರದ ನೀತಿ ಜಾರಿಗೆ ತಂದು, ತಳ ಸಮುದಾಯಕ್ಕೆ ಅನ್ಯಾಯ ಮಾಡಲು ಸಜ್ಜಾಗಿವೆ. ಇದನ್ನು ತಡೆಯದೆ ಹೋದರೆ ದೇಶದ ಪರಿಸ್ಥಿತಿ ಅದೊಗತಿ ಆಗುತ್ತದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ದೂರಿದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡ ಮಹಾಲಿಂಗ ದೊಡ್ಡಮನಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ನರಸಣ್ಣ ನಾಯಕ, ಹನುಮಂತ ಮಡಿವಾಳ ಮಕ್ತುಂಪಾಷ, ಗುರು ನಾಯಕ, ಮೌನೇಶ ದಾಸರ್, ಶಿವರಾಜ ವಠಾರ, ಮೈಬು ಕುರಕುಂದಿ, ಭೂಜಪ್ಪ, ಬಸವರಾಜ ಲಿಂಗದಹಳ್ಳಿ, ದುರಗಪ್ಪ ಹೊರಟಿ, ಬಾಷ್ ಸಾಬ್ ಶಾನ್ಯರ್‌ದೊಡ್ಡಿ ಇನ್ನಿತರರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos