ಇಸ್ರೋದಿಂದ ಚಂದ್ರಯಾನ -3 ಗೆ ಭರ್ಜರಿ ತಯಾರಿ

ಇಸ್ರೋದಿಂದ ಚಂದ್ರಯಾನ -3 ಗೆ ಭರ್ಜರಿ ತಯಾರಿ

ಬೆಂಗಳೂರು, ಜ. 01: ನಗರದ ಅಂತರಿಕ್ಷ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿ, ಚಂದ್ರಯಾನ -2 ಬಹುತೇಕ  ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ಅದೇ ಗುರಿ, ಉದ್ದೇಶಗಳೊಂದಿಗೆ ಚಂದ್ರಯಾನ 3 ಕೈಗೊಳ್ಳಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ಈಗಾಗಲೇ ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ.  ಉಡಾವಣೆ ವಾಹನ, ಲ್ಯಾಂಡರ್ ತಯಾರಿ  ಸೇರಿ 600  ಕೋಟಿ ರೂ. ವೆಚ್ಚ ಮಾಡಲಾಗುತ್ತದೆ.

ಮಾನವ ಸಹಿತ ಬಾಹ್ಯಾಕಾಶ ಯಾತ್ರೆಯ ಯೋಜನೆಯಾಗಿರುವ ಗಗನಯಾನಗೆ ಇಸ್ರೋ ಸಿದ್ಧಗೊಂಡಿದ್ದು, ತರಬೇತಿ ಪಡೆದ ನಾಲ್ಕು ಮಂದಿಯು ಯಾನದಲ್ಲಿ ಇರಲಿದ್ದಾರೆ. ವರ್ಷಾಂತ್ಯ ಅಥವಾ ಮುಂದಿನ ವರ್ಷ ಮೊದಲ‌ ತಿಂಗಳಲ್ಲಿ ಗಗನ್ ಯಾನ ಕೈಗೊಳ್ಳಲಾಗುತ್ತದೆ.

ಚಂದ್ರಯಾನ 3 ರಲ್ಲಿ ಲ್ಯಾಂಡರ್, ರೋವರ್ ಮಾತ್ರ ಇರಲಿವೆ.  ಚಂದ್ರಯಾನ 2ರ ಆರ್ಬಿಟ್ ಈಗಾಗಲೇ  ಚಂದ್ರನಂಗಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದರೊಂದಿಗೆ ಚಂದ್ರಯಾನ – 3 ರ ಲ್ಯಾಂಡರ್ , ರೋವರ್ ಅನ್ನು ಸಂಪರ್ಕ ಮಾಡಲಾಗುತ್ತದೆ. ಅಂದಾಜು 2021 ಆರಂಭದಲ್ಲಿಯೇ ಚಂದ್ರಯಾನ -3 ಜರುಗಲಿದೆ ಎಂದು ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos