ಸುಧಾಕರ್ ಗೆ ಜಾಡಿಸಿದ ಪ್ರದೀಪ್ ಈಶ್ವರ್

ಸುಧಾಕರ್ ಗೆ ಜಾಡಿಸಿದ ಪ್ರದೀಪ್ ಈಶ್ವರ್

ಬೆಂಗಳೂರು: ವಿಧಾನಸಭಾ ಚುನಾವಣೆ ಸೋಲುಕಂಡಿರುವ ಮಾಜಿ ಸಚಿವ ಡಾ.ಕೆ ಸುಧಾಕರ್ ಅವರಿಗೆ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್ ನೀಡಲಾಗಿದೆ. ಇದರ ಬೆನ್ನಲ್ಲೇ ರಾಜಕೀಯ ಎದುರಾಳಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರಪ್ಪ ಅವರು ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯಿಂದ ಹೇಗೆ ಟಿಕೆಟ್ ಸಿಕ್ಕಿತ್ತು..?  ಕೆಲ ಬಿಜೆಪಿ ನಾಯಕರು ಇವರಿಗೆ ಸಹಾಯ ಮಾಡಿದ್ದಾರೆ. ಸುಧಾಕರ್ ಕಾಂಗ್ರೆಸ್ ಗೆ ಥ್ರೆಟ್ ಅಲ್ಲ.  ಬಿಜೆಪಿಗೆ ಥ್ರೆಟ್.  ನಾನು ಹಗರಣ ಮಾಡಿಲ್ಲ ಎಂದು ಪ್ರಮಾಣ ಮಾಡುತ್ತೇನೆ. ಪ್ರಮಾಣಮಾಡಲು ಸುಧಾಕರ್ ರೆಡಿ ಇದ್ದಾರಾ ಎಂದು ಪ್ರದೀಪ್ ಈಶ್ವರ್ ಸವಾಲು ಹಾಕಿದರು.

ಇಂದು ಮಾಧ್ಯಮಗಳ ಜೊತೆ  ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್,  ಸುಧಾಕರ್ ರನ್ನು ಪಾರ್ಲಿಮೆಂಟ್ ಗೆ ಹೋಗೋಕೆ ಬಿಡಲ್ಲ.  ಕೋವಿಡ್  ಸಮಯದಲ್ಲಿ 2200 ಕೋಟಿ ರೂ.  ಅಕ್ರಮ ಆರೋಪವಿದೆ.  ಯತ್ನಾಳ್ ಅವರೇ 40 ಸಾವಿರ ಅಕ್ರಮ ಎಂದಿದ್ದಾರೆ. 1 ಮಾಸ್ಕ್ ಗೆ 450 ರೂ ಕೊಟ್ಟು ಹಗರಣ ಮಾಡಿದ್ದಾರೆ. ಸುಧಾಕರ್ ಗೆ ಮತ ಹಾಕಿದ್ರೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.

ಕೇಂದ್ರ ಸರ್ಕಾರವೇ ಬಂದು ನಿಂತರೂ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಸುಧಾಕರ್ ಗೆಲ್ಲೋಕೆ ಬಿಡಲ್ಲ. ಸುಧಾಕರ್ ಸಂಸತ್ ಮೆಟ್ಟಿಲು ಹತ್ತೋಕೆ ಬಿಡಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos