ಬೆಲೆ ಏರಿಕೆ ನಡುವೆಯೂ ಖರೀದಿ ಬಲು ಜೋರು

ಬೆಲೆ ಏರಿಕೆ ನಡುವೆಯೂ ಖರೀದಿ ಬಲು ಜೋರು

ಬಾಗೇಪಲ್ಲಿ, ಜ. 14: ಮಕರ ಸಂಕ್ರಾತಿ ಹಬ್ಬದ ಮುನ್ನಾ ದಿನವಾದ ಇಂದು ನಗರದ ಮಾರುಕಟ್ಟೆಯಲ್ಲಿ ಕಬ್ಬು, ಗೆಣಸು, ಕಡಲೆಕಾಯಿ, ಅವರೆಕಾಯಿ, ಹೂವಿನ ಮಾರಾಟ ಜೋರಾಗಿ ಕಂಡುಬಂತು.

ಬಾಗೇಪಲ್ಲಿ ಪಟ್ಟಣದ ಮುಖ್ಯ ಡಿ.ವಿ.ಜಿ ರಸ್ತೆಯಲ್ಲಿ ಹಾಗೂ ವಿವಿಧ ಕಡೆಗಳಲ್ಲಿ ಕಬ್ಬು ರಾಶಿಗಟ್ಟಲೇ ತಂದಿಡಲಾಗಿತ್ತು. ಇಂದು ಬೆಳಿಗ್ಗೆಯಿಂದಲೇ ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ಕಬ್ಬು ಪೈಪೋಟಿಯಲ್ಲಿ ಮಾರಾಟ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ವ್ಯಾಪಾರಸ್ಥರು ರಸ್ತೆ ಬದಿಯಲ್ಲಿ ತಾವು ತಂದಿದ್ದ ವಸ್ತುಗಳ ರಾಶಿ ಹಾಕಿಕೊಂಡು ಗ್ರಾಹಕರನ್ನು ಸೆಳೆಯುವ ಕಸರತ್ತು ನಡೆಸಿದ್ದರು.

ಮಾರುಕಟ್ಟೆಯಲ್ಲಿ ಜೋಡಿ ಕಬ್ಬು 40ರಿಂದ 50ರ ವರೆಗೆ ಮಾರಾಟವಾಗುತ್ತಿತ್ತು. ಕಡಲೆಕಾಯಿ ಕೆ.ಜಿಗೆ  70ರೂ, ಅವರೆಕಾಯಿ  40 ರೂ, ಗೆಣಸು  40 ರೂ ಇದ್ದರೆ, ಹೂವಿನ ಬೆಲೆ ಸ್ವಲ್ಪ ಏರಿಕೆಯಾಗಿತ್ತು. ಕೆ.ಜಿ ಸೇವಂತಿಗೆಗೆ  60 ರೂ, ರೋಜಾ ರೂ 80, ಚೆಂಡುಹೂವು  30 ರೂ ಮಾರಾಟವಾಗುತ್ತಿದ್ದವು.

ಬಾಗಿನ ಸಾಮಗ್ರಿಗಳ ಜತೆಗೆ ಎಳ್ಳು, ಅಚ್ಚುಬೆಲ್ಲ, ಬಿಳಿಬೆಲ್ಲ, ಸಕ್ಕರೆ ಅಚ್ಚು, ಕಬ್ಬಿನ ಜಲ್ಲೆ, ಎಳ್ಳು-ಬೆಲ್ಲ ಮಿಶ್ರಣ ಮಾಡಿದ ಪ್ಯಾಕೆಟ್‌ಗೆ ಬೇಡಿಕೆ ಇತ್ತು. ಬಜಾರ್‌ ರಸ್ತೆಯಲ್ಲಿ ಹಬ್ಬದ ಖರೀದಿಗೆ ಬಂದ ಜನರ ದಟ್ಟಣೆಯಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸಿದರು. ಏನೇ ಅಗಲಿ ಎಷ್ಟೇ ಬೆಲೆಯಾಗಲಿ ಈ ಕಾಸ್ಟ್ಲೀ ದುನಿಯಾದಲ್ಲಿ ರೈತರಿಗೆ ಬಲ ಕಷ್ಟ.

ಫ್ರೆಶ್ ನ್ಯೂಸ್

Latest Posts

Featured Videos