ಚರ್ಮ ರೋಗಗಳಿಗೆ ಅನಾನಸ್ ಹಣ‍್ಣು

ಚರ್ಮ ರೋಗಗಳಿಗೆ ಅನಾನಸ್ ಹಣ‍್ಣು

ಬೆಂಗಳೂರು, ನ. 11: ಅನಾನಸ್ ಹಣ್ಣು ಹಲವು ರೋಗಗಳಿಗೆ ರಾಮಬಾಣ. ನಿಯಮಿತವಾಗಿ ಈ ಹಣ್ಣನ್ನು ಸೇವಿಸುತ್ತಾ ಬಂದರೆ ಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗೂ ಉರಿ ಮೂತ್ರ ಸಮಸ್ಯೆ, ಗಂಟಲು ನೋವು ಹೀಗೆ ಸಾಕಷ್ಟು ಸಮಸ್ಯೆಗಳು ಬಗೆಹರಿಯುತ್ತವೆ. ಅಷ್ಟೇ ಅಲ್ಲ ಈ ಹಣ್ಣು ಆರೋಗ್ಯದಂತೆಯೇ ತ್ವಚೆಗೂ ರಾಮಬಾಣವಾಗಿದೆ.

ಹೌದು, ಕಜ್ಜಿ ತುರಿ, ಗಜಕರ್ಣ ಸೇರಿದಂತೆ ಚರ್ಮ ರೋಗಗಳಿಗೆ ಈ ಅನಾನಸ್ ಹಣ್ಣಿನ ರಸವನ್ನು ಲೇಪನ ಮಾಡುವುದರಿಂದ ಚರ್ಮ ರೋಗ ನಿವಾರಣೆ ಮಾಡಬಹುದು. ಹಾಗೆಯೇ 7 ದಿನಗಳ ಕಾಲ ಇದನ್ನು ಮುಂದುವರೆಸಬೇಕಾಗುತ್ತದೆ.

ಅನಾನಸ್ ನಲ್ಲಿ ಆಂಟಿ ಆಕ್ಸಿಡೆಂಟಲ್ ನಿಂದ ತುಂಬಿದ್ದು, ಹೀಗಾಗಿ ಚರ್ಮಕ್ಕೆ ಬೇಕಾದ ಅಂಶಗಳು ಇದರಲ್ಲಿವೆ. ಹಾಲಿನೊಂದಿಗೆ ಈ ಅನಾನಸ್ ಹಣ್ಣಿನ ಚೂರುಗಳನ್ನು ಹಾಕಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿ. ನಂತರ ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಬೇಕು. ಹೀಗೆ ಮಾಡಿದಲ್ಲಿ ಮುಖದ ಮೇಲಿನ ಸುಕ್ಕು ತಡೆಯುತ್ತದೆ. ತ್ವಚೆಯೂ ಕಾಂತಿಯುತವಾಗುತ್ತದೆ.

ಅನಾನಸ್ ಹಾಗೂ ಪಪ್ಪಾಯ ತಿರುಳನ್ನು ಹಾಕಿ ಜೇನುತುಪ್ಪದೊಂದಿಗೆ ಮಿಕ್ಸ್ ಮಾಡಬೇಕು. ನಂತರ ಮುಖಕ್ಕೆ ಲೇಪನ ಮಾಡಬೇಕು. ಇದಾದ ನಂತರದಲ್ಲಿ 20 ನಿಮಿಷದ ನಂತರ ಮುಖ ತೊಳೆಯುವುದರಿಂದ ಮುಖ ಕಾಂತಿಯುಕ್ತವಾಗುತ್ತದೆ. ಸತ್ತ ಜೀವಕೋಶಕ್ಕೆ ಜೀವ ಬರುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos