PBKS VS MI ಇಂದು ಮುಖಾಮುಖಿ

PBKS VS MI ಇಂದು ಮುಖಾಮುಖಿ

ಬೆಂಗಳೂರು: ಐಪಿಎಲ್​ 2024 ರ 33 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿವೆ. ಪಂಜಾಬ್‌ನ ತವರು ಮೈದಾನ ಮುಲ್ಲನ್‌ಪುರದಲ್ಲಿ ಈ ಪಂದ್ಯ ನಡೆಯಲಿದೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಇಂದಿನ ಪಂದ್ಯ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾಗೆ ಐಪಿಎಲ್​ನಲ್ಲಿ 250ನೇ ಪಂದ್ಯವಾಗಿದೆ. ಈ ಮೂಲಕ ರೋಹಿತ್ ಐಪಿಎಲ್‌ನಲ್ಲಿ 250 ಪಂದ್ಯಗಳನ್ನು ಆಡಿದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಪಂಜಾಬ್ ನೂತನ ಹೋಂ ಗ್ರೌಂಡ್‌ ಆಗಿರುವ ಮೂಲ್ಲಾನ್ ಪುರದಲ್ಲಿ ಈ ಮಹತ್ವ ಪಂದ್ಯಕ್ಕೆ ಸಾಕ್ಷಿ ಆಗಲಿದೆ. ಪಂಜಾಬ್ ಮತ್ತು ಮುಂಬೈ ಸಾಧಿಸಿದೆ ಆಡಿದ 6 ಪಂದ್ಯದಲ್ಲಿ ಎರಡರಲ್ಲಿ ಜಯ ಸಾಧಿಸಿವೆ. ನಾಲ್ಕರಲ್ಲಿ ಸೋತಿದೆ ಪಂಜಾಬ್ ರನ್ ರೇಟ್ ನಲ್ಲಿ ತುಸು ಮಂದಿ ಇರುವ ಕಾರಣ 7ನೇ ಸ್ಥಾನದಲ್ಲಿದೆ. ಮುಂಬೈ 8ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಪ್ರವೇಶ ಲಭಿಸಬೇಕಾದರೆ ಎರಡು ತಂಡಗಳು ಇಲ್ಲಿಂದ ಮೇಲ್ಗೊಂಡು ಸಾಧ್ಯವಾದಷ್ಟು ಹೆಚ್ಚು ಗೆಲುವನ್ನು ಸಾಧಿಸಬೇಕಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos