ಹುಟ್ಟೂರಿನಲ್ಲಿ ಇಂದು `ಪಾಪು’ ಅಂತ್ಯಕ್ರಿಯೆ

ಹುಟ್ಟೂರಿನಲ್ಲಿ ಇಂದು `ಪಾಪು’ ಅಂತ್ಯಕ್ರಿಯೆ

ಹಾವೇರಿ, ಮಾ. 17: ಕರ್ನಾಟಕದ ಮಂದಿ ಎಂದಿಗೂ ಪುಟ್ಟಪ್ಪ ಎನ್ನುವ ಎರಡು ಹೆಸರನ್ನು ಮರೆಯಲಾರರು. ಒಬ್ಬರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ, ಇನ್ನೊಬ್ಬರು ಪಾಟೀಲ್​ ಪುಟ್ಟಪ್ಪ. ಹೌದು, ರಾಜ್ಯದ ಇತಿಹಾಸದೊಂದಿಗೆ ಬೆರೆತು ಹೋಗಿರುವ ಬದುಕು ಪಾಟೀಲ್​ ಪುಟ್ಟಪ್ಪನವರದ್ದು. ಸ್ವಾತಂತ್ರ್ಯಕ್ಕೂ ಮೊದಲು ಬ್ರಿಟಿಷರ ವಿರುದ್ಧ ಹೋರಾಡುವ ಮೂಲಕ ತಮ್ಮ ಹೋರಾಟ ಜೀವನವನ್ನು ಆರಂಭಿಸಿದರು. ಸ್ವಾತಂತ್ರ್ಯದ ಬಳಿಕ, ಕರ್ನಾಟಕದ ಏಕೀಕರಣಕ್ಕಾಗಿ ಬೀದಿಗಿಳಿದರು. ಕನ್ನಡಕ್ಕಾಗಿ ಗೋಕಾಕ್​ ಚಳುವಳಿಯಲ್ಲಿ ದುಮುಕಿದರು.

ನೆನ್ನೆ ರಾತ್ರಿ ನಿಧನರಾದ ಹಿರಿಯ ಪತ್ರಕರ್ತ, ಸಾಹಿತಿ ಪಾಟೀಲ ಪುಟ್ಟಪ್ಪ ಅವರ ಅಂತ್ಯಕ್ರಿಯೆ ಇಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ನಡೆಯಲಿದೆ.

ಹುಬ್ಬಳ್ಳಿಯ ವಿಶ್ವೇಶ್ವರ ನಗರದ ಸ್ವಗೃಹದಲ್ಲಿ ಇಂದು ಬೆಳಗ್ಗೆ 9 ರಿಂದ 1 ರವರಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು ಎಂದು ಅವರ ಪುತ್ರ ಅಶೋಕ್ ಪಾಟೀಲ್ ತಿಳಿಸಿದ್ದಾರೆ.

ಪಾಟೀಲ್ ಪುಟ್ಟಪ್ಪ ಅವರ ಅಂತ್ಯ ಸಂಸ್ಕಾರವನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ನೆರವೇರಿಸಲಾಗುವುದು ಎಂದು ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos