ಪಾಕ್ ನಲ್ಲಿ ಹಾಲು ದುಬಾರಿ

ಪಾಕ್ ನಲ್ಲಿ ಹಾಲು ದುಬಾರಿ

ಕರಾಚಿ , ಸೆ. 11 : ಇತ್ತೀಚೆಗಷ್ಟೇ ಕರಾಚಿಯಲ್ಲಿ ನಡೆದ ಮೊಹರಂ ಆಚರಣೆ ಹಿನ್ನೆಲೆ ಹಾಲಿಗೆ ತೀವ್ರ ಬೇಡಿಕೆ ಮತ್ತು ಕೊರತೆ ಸೃಷ್ಟಿಯಾಗಿತ್ತು. ಕುಡಿಯುವ ಹಾಲಿನ ದರ ಪೆಟ್ರೋಲ್ ದರವನ್ನೇ ಮೀರಿಸಿದೆ. ಭಾರತದಲ್ಲಿ ಒಂದು ಲೀಟರ್ ಹಾಲು ಗರಿಷ್ಠ ಎಂದರೂ 35 ರಿಂದ 40 ರೂ ಗಳಿರಬಹುದು. ಭಾರತದ ವಿರುದ್ಧ ಸದಾ ಕಾಲ ಕಾಲು ಕೆರೆಯುವ ಪಾಕಿಸ್ತಾನದಲ್ಲಿ ಒಂದು ಲೀಟರ್ ಹಾಲು ಬರೊಬ್ಬರಿ 140 ರೂ.ಗಳಾಗಿದೆ.
ಪಾಕಿಸ್ತಾನದ ಕರಾಚಿ ಮತ್ತು ಸಿಂಧ್ ಪ್ರಾಂತ್ಯದಲ್ಲಿ ಹಾಲಿನ ಬೆಲೆ 140 ರೂ.ಗೆ ತಲುಪಿತ್ತು. ಪೆಟ್ರೋಲ್ ದರ 113 ರೂ. ಡೀಸೆಲ್ 91 ರೂ.ಗೆ ಮಾರಾಟವಾಗುತ್ತಿದೆ. ಮೊಹರಂ ಹಿನ್ನೆಲೆ ಹಾಲು, ಜ್ಯೂಸ್ ಮತ್ತು ತಣ್ಣನೆಯ ನೀರನ್ನು ಒದಗಿಸಲಾಗುತ್ತದೆ. 120 ರಿಂದ 140 ರೂ.ಗೆ ಪಾಕಿಸ್ತಾನದಲ್ಲಿ ಇದೇ ಮೊದಲ ಹಾಲಿನ ಬೆಲೆ ದುಬಾರಿ ಎಂದು ಹೇಳಲಾಗಿದೆ.
ಪ್ರಸ್ತುತ ಕರಾಚಿಯಲ್ಲಿ ಹಾಲಿನ ದರ ಸ್ಥಳೀಯ ಜಿಲ್ಲಾಡಳಿತ 94 ರೂ. ನಿಗದಿ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos