ವಾರಂಗಲ್ ನಲ್ಲಿ ಪಾಗಲ್ ಪ್ರೇಮಿಗಳು

ವಾರಂಗಲ್ ನಲ್ಲಿ ಪಾಗಲ್ ಪ್ರೇಮಿಗಳು

ವಾರಂಗಲ್, ಜ. 12 : ಪ್ರೀತಿಗಾಗಿ ಪ್ರಾಣ ಕೊಡಲೂ ಸಿದ್ಧ ಎನ್ನುವ ಅನೇಕ ಪ್ರೇಮಿಗಳಿದ್ದಾರೆ. ಪ್ರೀತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಜೀವವನ್ನೇ ಕಳೆದುಕೊಂಡವರೂ ಇದ್ದಾರೆ. ಆದರೆ, ತೆಲಂಗಾಣದ ವಾರಂಗಲ್ನ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ರೂಮಿಗೆ ಕರೆದು, ಆಕೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ತನ್ನ ಪ್ರೇಯಸಿಯ ಕುತ್ತಿಗೆ ಸೀಳಿ ಕೊಲೆ ಮಾಡಿರುವ ಮೊಹಮ್ಮದ್ ಶಾಹಿದ್ ಪೊಲೀಸರಿಗೆ ಶರಣಾಗಿದ್ದಾನೆ. ಲಷ್ಕರ್ ಸಿಂಗರಂ ಗ್ರಾಮದಲ್ಲಿ ವಾಸವಾಗಿದ್ದ ಮುನಿಗಲ ಹಾರತಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ ಶಾಹಿದ್ ಆಕೆಯನ್ನು ಮದುವೆಯಾಗಲು ನಿರ್ಧರಿಸಿದ್ದ. ಆದರೆ, ಆಕೆ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಇತ್ತೀಚೆಗೆ ಆತನಿಗೆ ಅನುಮಾನ ಶುರುವಾಗಿತ್ತು. ಆ ಅನುಮಾನದಿಂದಲೇ ಪ್ರಿಯತಮೆಯನ್ನು ಭೀಕರವಾಗಿ ಹತ್ಯೆ ಮಾಡಿರುವುದಾಗಿ ಆತ ಹೇಳಿಕೆ ನೀಡಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos