ಅಶ್ಲೀಲ ಪಾಠ ಮಾಡಿದ ಕಾಮುಕ ಶಿಕ್ಷಕ

ಅಶ್ಲೀಲ ಪಾಠ ಮಾಡಿದ ಕಾಮುಕ ಶಿಕ್ಷಕ

ಗದಗ, ಜು.05 : ಕಾಲೇಜಿನ ಕಾಮುಕ ಪ್ರಾಂಶುಪಾಲನೊಬ್ಬ ವಿದ್ಯಾರ್ಥಿನಿ ಜೊತೆ ಅಶ್ಲೀಲ ವರ್ತಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಖಾಸಗಿ ಕಾಲೇಜಿ ಪ್ರಾಂಶುಪಾಲ ಬಸವರಾಜ್ ವಿದ್ಯಾರ್ಥಿನಿ ಜೊತೆ ಅಶ್ಲೀಲವಾಗಿ ವರ್ತಿಸಿದ ಕಾಮುಕ. ಈತ ಕಾಲೇಜಿನ ವಿದ್ಯಾರ್ಥಿನಿ ಜೊತೆ ಚಿನ್ನ, ರನ್ನಾ, ಸೆಕ್ಸ್ ಪಾಠ ಮಾಡಿರುವುದು ಬೆಳಕಿಗೆ ಬಂದಿದೆ. ಇಂಟರ್ನಲ್ ಮಾರ್ಕ್ಸ್ ಗಾಗಿ ನಡೆದ ವಿದ್ಯಾರ್ಥಿನಿ ಹಾಗೂ ಪ್ರಾಂಶುಪಾಲನ ಕಾಮಪುರಾಣ ಈಗ ಬೆಳಕಿಗೆ ಬಂದಿದೆ. ಬೆಳಗ್ಗೆ ಸಭ್ಯನ ಹಾಗೆ ಬಂದು ಪಾಠ ಮಾಡುತ್ತಿದ್ದ ಬಸವರಾಜ್, ಆ ಬಳಿಕ ವಿದ್ಯಾರ್ಥಿನಿಯರ ಇಂಟರ್ನಲ್ ಮಾರ್ಕ್ಸ್ ಮುಂದಿಟ್ಟುಕೊಂಡು ಕಾಮದ ಪಾಠ ಶುರು ಮಾಡಿಕೊಳ್ಳುತ್ತಿದ್ದನು. ಫೋಟೋ, ಮೆಸೇಜ್ಗಳು ವೈರಲ್ ಆಗಿದ್ದು, ಕಾಲೇಜಿನ ಹಳೆ ವಿದ್ಯಾರ್ಥಿಗಳು ಬಸವರಾಜ್ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಸವರಾಜ್ ಈ ರೀತಿ ಮಾಡಿರುವುದು ಇದೇ ಮೊದಲೇನಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಇದೇ ರೀತಿ ಕಾಮಪುರಾಣ ಮುಂದುವರಿಸಿದ್ದಾನೆ. ಈ ಬಗ್ಗೆ ಕಾಲೇಜ್ ಆಡಳಿತಕ್ಕೆ ಕೇಳಿದರೆ ಸೂಕ್ತ ದಾಖಲೆ ನೀಡಿ, ರೈಟಿಂಗ್ನಲ್ಲಿ ಬರೆದುಕೊಡಿ ಎನ್ನುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos