ಈರುಳ್ಳಿ ಕಳ್ಳರ ಬಂಧನ!

ಈರುಳ್ಳಿ ಕಳ್ಳರ ಬಂಧನ!

ಮಹಾರಾಷ್ಟ್ರ, ಡಿ. 16 : ಮೊಬೈಲ್ ಫೋನ್ ಅಂಗಡಿಗೆ, ಚಿನ್ನದ ಅಂಗಡಿಗೆ ಅಥವಾ ಬಟ್ಟೆ, ಎಲೆಕ್ಟ್ರಾನಿಕ್ ಅಂಗಡಿಗಳಿಗೆ ಕಳ್ಳರು ನುಗ್ಗಿ ಸಾವಿರಾರು ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದ ಪ್ರಕರಣಗಳನ್ನು ನಾವು ಕೇಳಿರುತ್ತೇವೆ. ಆದರೆ ಕಳೆದ ಕೆಲವು ದಿನಗಳಿಂದ ಕಳ್ಳರಿಗೆ ಇವೆಲ್ಲವುಗಳಿಂತಾ ಬೆಲೆ ಬಾಳುವ ವಸ್ತು ಸಿಕ್ಕಿದೆ. ಅದುವೇ ಈರುಳ್ಳಿ.  ಬೆಲೆ ಹೆಚ್ಚಳವಾಗಿರುವುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದಷ್ಟು ಜೋಕ್ ಗಳು, ಮೀಮ್ ಗಳು ಹರಿದಾಡುತ್ತಿವೆ. ಆದರೆ ಇಲ್ಲಿಬ್ಬರು ಕಳ್ಳರು ಬರೋಬ್ಬರಿ 110 ಕೆ.ಜಿ.ಗಳಷ್ಟು ಈರುಳ್ಳಿಯನ್ನು ಕದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos