ಬಿಡಿಎಗೆ ಒಂದು ಲಕ್ಷ ದಂಡ

ಬಿಡಿಎಗೆ ಒಂದು ಲಕ್ಷ ದಂಡ

  ಬೆಂಗಳೂರು, ನ. 6: ನಿಯಮ ಪಾಲಿಸದೆ ಅನಧಿಕೃತವಾಗಿ ಹಿರಿಯ ನಾಗರಿಕರೊಬ್ಬರ ಖಾಸಗಿ ಜಮೀನು ಸ್ವಾಧೀನಪಡಿಸಿ ಕೊಂಡಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿದೆ.

ಅಲ್ಲದೇ ಅರ್ಜಿದಾರರು ಹಾಗೂ ಬಿಡಿಎ ಕ್ರಮದಿಂದ ಬಾಧಿತರಾಗಿರುವ 67 ವರ್ಷದ ಪಿ.ಜಿ. ಬೆಳ್ಳಿಯಪ್ಪ ಅವರಿಗೆ 31.613 ಚದರ ಅಡಿ ಅಭಿವೃದ್ಧಿ ಹೊಂದಿದ ಜಾಗ ಹಾಗೂ ದಂಡದ 1 ಲಕ್ಷ ರೂ. ಹಣವನ್ನು ನೀಡುವಂತೆ ಆದೇಶಿಸಿದೆ.ಪ್ರಕರಣಕ್ಕೆ ಸಂಬಧಿಸಿದತೆ ಬಿಡಿಎ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಮುಖ್ಯ ನ್ಯಾಯ ಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.

ಈ ವೇಳೆ ಬಿಡಿಎ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡದ್ದ  ನ್ಯಾಯಪೀಠ, ಇದೊಂದೇ ಪ್ರಕರಣವಲ್ಲ, ಬಿಡಿಎ ಹತ್ತಾರು ಪ್ರಕರಣಗಳಲ್ಲಿ ಹೀಗೆಯೇ ವರ್ತಿಸಿದೆ. ನಿಯಮಗಳನ್ನು ಪಾಲಿಸದೆ ಖಾಸಗಿ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿರುವುದಲ್ಲದೇ ಕಾನೂನು ರೀತಿ ಪರಿಹಾರ ಮತ್ತು ಪರ್ಯಾಯ ಭೂಮಿ ನೀಡಿಲ್ಲ. ಇದು ಒಪ್ಪುವಂತಹದ್ದಲ್ಲ ಎಂದು ಚಾಟಿ ಬೀಸಿತು. ಅಲ್ಲದೇ, ಬೆಳ್ಳಿಯಪ್ಪ ಅವರಿಗೆ ಸೇರಿದ ಜಾಗವನ್ನು 2012 ರಿಂದ ಅಕ್ರಮವಾಗಿ ಬಳಸಿಕೊಂಡಿದ್ದಕ್ಕೆ ಬಿಡಿಎಗೆ 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಪೀಠ, ಈ ಹಿಂದೆ ಏಕಸದಸ್ಯ ನ್ಯಾಯಪೀಠ ನೀಡಿದ ಆದೇಶವನ್ನು ಎತ್ತಿಹಿಡಿಯಿತು.

 

ಫ್ರೆಶ್ ನ್ಯೂಸ್

Latest Posts

Featured Videos