ದಳಪತಿಗಳ ಕಚೇರಿ ಖಾಲಿ ಖಾಲಿ

ದಳಪತಿಗಳ ಕಚೇರಿ ಖಾಲಿ ಖಾಲಿ

ಬೆಂಗಳೂರು, ಡಿ. 18 : ಜೆಡಿಎಸ್ ಕಛೇರಿಗೆ ಕಾಲಿಟ್ಟಾಗ ಗೋಚರಿಸುವುದು ಅಲ್ಲಿನ ಎಲ್ಲಾ ಸೀಟುಗಳು ಖಾಲಿ ಖಾಲಿ. ಕಛೇರಿಯಲ್ಲಿ ನಿಶ್ಯಬ್ಧ ವಾತಾವರಣ. ಅಧಿಕಾರಿಗಳು ಕುಳಿತುಕೊಳ್ಳಬೇಕಿದ ಆಸನಗಳೆಲ್ಲಾ ಖಾಲಿಯಾಗಿ ಕಛೇರಿ ಬಣಗುಡುತ್ತಿದೆ. ಜೆಡಿಎಸ್ ಪಕ್ಷದ ಪಛೇರಿಯ ಸದ್ಯದ ಪರಿಸ್ಥಿತಿ.
ಜೆಡಿಎಸ್ ಗೆ ಅಧಿಕಾರ ಹೋದ ಮೇಲೆ ಕೋಟ್ಯಂತರ ರೂ. ವೆಚ್ಚದಲ್ಲಿ ಭವ್ಯವಾಗಿ ನಿರ್ಮಾಣ ಮಾಡಿದ್ದ ಕಚೇರಿ ಖಾಲಿ ಹೊಡೆಯುತ್ತಿದೆ.
ಕೃಷ್ಣ ಮಿಲ್ ಬಳಿ ಇರೋ ಜೆಡಿಎಸ್ ಕಚೇರಿಗೆ ಸಮ್ಮಿಶ್ರ ಸರ್ಕಾರ ಇದ್ದಾಗ ಕಚೇರಿಯು ನಿತ್ಯ ಕಾರ್ಯಚಟುವಟಿಕೆಗಳ ತಾಣ. ನೂರಾರು ಕಾರ್ಯಕರ್ತರು, ಸಚಿವರು ಹೀಗೆ ಕಚೇರಿ ತುಂಬಿ ತುಳುಕುತ್ತಿತ್ತು. ಮಾಜಿ ಪ್ರಧಾನಿ ದೇವೇಗೌಡರಂತೂ ನಿತ್ಯ ಕಚೇರಿಗೆ ಬಂದು ಸಭೆಗಳ ಮೇಲೆ ಸಭೆಗಳನ್ನು ಮಾಡುತ್ತಿದ್ದರು. ಯಾವಾಗ ಲೋಕಸಭೆ ಮತ್ತು ಉಪ ಚುನಾವಣೆ ಸೋಲಾಯ್ತೋ ಜೆಡಿಎಸ್ ಕಚೇರಿಗೆ ನಾಯಕರು, ಕಾರ್ಯಕರ್ತರು ಬರುವುದನ್ನು ನಿಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಾಯಕರು ಕಚೇರಿ ಕಡೆ ಸುಳಿತ್ತಿಲ್ಲ. ಕಾರ್ಯಕರ್ತರ ಸದ್ದು ಇಲ್ಲದಂತಾಗಿದೆ. ದೇವೇಗೌಡರು ಕೂಡ ಕಚೇರಿಗೆ ಬರೋದು ಕಡಿಮೆ ಮಾಡಿದ್ದಾರೆ. ಹೀಗಾಗಿ ಜೆಡಿಎಸ್ ಕಚೇರಿ ಫುಲ್ ಖಾಲಿ ಖಾಲಿ ಆಗಿದೆ. ಆನಂದ್ ರಾವ್ ಸರ್ಕಲ್ ಬಳಿಕ ಕಚೇರಿಯನ್ನ ಕಾಂಗ್ರೆಸ್ ಪಕ್ಷ ಕೋರ್ಟಿನಲ್ಲಿ ಹೋರಾಡಿ ತನ್ನ ವಶಕ್ಕೆ ತೆಗೆದುಕೊಂಡಿತ್ತು. ನಂತರ ದೇವೇಗೌಡರು ಏಕಾಂಗಿ ಜೆಡಿಎಸ್ ಕಚೇರಿ ಕಟ್ಟಿದರು. ಹೀಗೆ ಬೆವರು ಸುರಿಸಿ ಕಟ್ಟಿದ ಕಚೇರಿ ಇಂದು ಖಾಲಿ ಖಾಲಿಯಾಗಿ ಕಾಣುತ್ತಿರುವುದು ಮಾತ್ರ ವಿಪರ್ಯಾಸವೇ ಎನ್ನಬಹುದು.

ಫ್ರೆಶ್ ನ್ಯೂಸ್

Latest Posts

Featured Videos