ನೋವಲ್ಲೂ ಪರೀಕ್ಷೆ ಬರೆದು ಸೆಕೆಂಡ್ ಟಾಪರ್ ಆದ ಭಾವನಾ

ನೋವಲ್ಲೂ ಪರೀಕ್ಷೆ ಬರೆದು ಸೆಕೆಂಡ್ ಟಾಪರ್ ಆದ ಭಾವನಾ

ಬೆಂಗಳೂರು, ಏ. 30, ನ್ಯೂಸ್ ಎಕ್ಸ್ ಪ್ರೆಸ್: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಬೆಂಗಳೂರು ಉತ್ತರದ ಸೌಂದರ್ಯ ಶಾಲೆಯ ವಿದ್ಯಾರ್ಥಿನಿ ಭಾವನಾ 624 ಅಂಕ ಗಳಿಸಿ ರಾಜ್ಯಕ್ಕೆ ಸೆಕೆಂಡ್ ಟಾಪರ್ ಆಗಿದ್ದಾರೆ. ಇದಕ್ಕೆ ಶಾಲೆಯ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶಾಲೆಯ ಮುಖ್ಯಶಿಕ್ಷಕಿ ದಾಕ್ಷಾಯಿಣಿ ಪ್ರತಿಕ್ರಿಯಿಸಿದ್ದು, ಭಾವನಾ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾವನಾ ಶಾಲೆಯಲ್ಲಿ ಶ್ರದ್ಧೆಯಿಂದ ಪಾಠ ಕೇಳುತ್ತಿದ್ದಳು, ಇಡೀ ಶಿಕ್ಷಕ ಸಮುದಾಯ ಅವಳಿಗೆ ಬೆಂಬಲ ನೀಡಿತ್ತು. ಅಲ್ಲದೆ ಆಕೆಯ ಪರೀಕ್ಷೆ ದಿನವೇ ಅವರ ಮನೆಯಲ್ಲಿ ಸಾವು ಸಂಭವಿಸಿತ್ತು. ಆ ನೋವಿನಲ್ಲೂ ಆಕೆ ಪರೀಕ್ಷೆ ಬರೆದು ಟಾಪರ್ ಆಗಿದ್ದಾಳೆ ಅಂತಾ ಖುಷಿ ವ್ಯಕ್ತಪಡಿಸಿದ್ರು. ಇನ್ನು ಭಾವನಾ ತಂದೆ ಹಾಗೂ ತಾಯಿ ಕೂಡಾ ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಮಗಳು ಮನೆಯಲ್ಲಿ ದಿನಕ್ಕೆ ಒಂದು ಗಂಟೆ ಓದಿದ್ರೂ ಹೆಚ್ಚು, ನಾವು ಕೂಡಾ ಅವಳಿಗೆ ಓದು ಅಂತಾ ಒತ್ತಡ ಹೇರ್ತಿರಲಿಲ್ಲ ಅಂತಾ ಹೇಳಿದ್ರು. ಇನ್ನು ಪರೀಕ್ಷೆಯ ದಿನವೇ ಅವಳ ತಾತ ನಿಧನ ಹೊಂದಿದ್ರೂ, ದುಃಖದಲ್ಲೇ ಪರೀಕ್ಷೆ ಬರೆದು ಸೆಕೆಂಡ್ ಟಾಪರ್ ಆಗಿದ್ದಾಳೆ ಅಂತಾ ಸಂತಸ ವ್ಯಕ್ತಪಡಿಸಿದ್ರು.

ಫ್ರೆಶ್ ನ್ಯೂಸ್

Latest Posts

Featured Videos