9 ಮಹಿಳಾ ಕ್ರೀಡಾಪಟುಗಳ ಹೆಸರು ಪದ್ಮ ಪ್ರಶಸ್ತಿಗೆ ಶಿಫಾರಸು!

9 ಮಹಿಳಾ ಕ್ರೀಡಾಪಟುಗಳ ಹೆಸರು ಪದ್ಮ ಪ್ರಶಸ್ತಿಗೆ ಶಿಫಾರಸು!

ನವದೆಹಲಿ, ಸೆ. 12: ಇದೇ ಮೊದಲ ಬಾರಿಗೆ ಇತಿಹಾಸದಲ್ಲಿ ದೇಶದ 9 ಜನ ಮಹಿಳಾ ಕ್ರೀಡಾಪಟುಗಳ ಹೆಸರನ್ನು ಪ್ರತಿಷ್ಠಿತ ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.  ಮೇರಿ ಕೋಮ್, ಪಿ.ವಿ ಸಿಂಧು ಸೇರಿ 9 ಕ್ರೀಡಾಪಟುಗಳ ಹೆಸರನ್ನು ಕ್ರೀಡಾ ಸಚಿವಾಲಯ ಗೃಹ ಇಲಾಖೆಗೆ ಕಳುಹಿಸಿದೆ.

6 ಬಾರಿಯ ವಿಶ್ವಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಅವರನ್ನು ಪದ್ಮ ವಿಭೂಷಣ ಪ್ರಶಸ್ತಿಗೆ ಶಿಫಾರಸು ಮಾಡಿದ್ದರೆ, ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರ ಹೆಸರನ್ನು ಪದ್ಮಭೂಷನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಕುಸ್ತಿ ಪಟು ವಿನೀಶ್ ಪೋಗಟ್, ಟೇಬಲ್ ಟೆನ್ನಿಸ್ ತಾರೆ ಮಣಿಕಾ ಬಾತ್ರ, ಕ್ರಿಕೆಟ್ ಟಿ ಟ್ವೆಂಟಿ ನಾಯಕಿ ಹರ್ಮನ್ ಪ್ರೀರ್ ಕೌರ್, ಹಾಕಿ ನಾಯಕಿ ರಾಣಿ ರಾಂಪಾಲ್, ಶೂಟರ್ ಸುಮಾ ಶಿರೂರ್, ಅವಳಿ ಪರ್ವತಾರೋಹಿಗಳಾದ ತಾಶಿ ಮತ್ತು ನಂಗ್ಶಿ ಮಲಿಕ್ ಅವರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos