ನ್ಯೂ ಇಯರ್ ವೇಳೆ ಯುವಕರೇ ಹುಷಾರ್..!

ನ್ಯೂ ಇಯರ್ ವೇಳೆ ಯುವಕರೇ ಹುಷಾರ್..!

ಮಂಗಳೂರು,ಡಿ. 31 : ಸಡಗರ, ಪಾರ್ಟಿ, ಮೋಜು, ಮಸ್ತಿ ಮಾಡಲು ಹೊಸ ವರ್ಷಕ್ಕೆ ಯುವಕರು ಸಜ್ಜಾಗುತ್ತಿದ್ದು, ಹೊಸ ವರ್ಷದಿನ ಹೆಣ್ಮಕ್ಕಳನ್ನು ಚುಡಾಯಿಸಿದರೆ ಹುಷಾರ್ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್ ಹರ್ಷ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಹೋಟೆಲ್, ರೆಸ್ಟೋರೆಂಟ್, ಕ್ಲಬ್ಗಳು ಹೊಸ ವರ್ಷಾಚರಣೆಗೆ ಎಲ್ಲೆಡೆ ಭರದ ಸಿದ್ಧತೆ ನಡೆಯುತ್ತಿದ್ದು, ರಾತ್ರಿ 12 ಗಂಟೆ 5 ನಿಮಿಷಕ್ಕೆ ಮಾತ್ರ ವರ್ಷಾಚರಣೆ ಮಾಡಲು ಅವಕಾಶ. ಆ ನಂತರ ಕಾರ್ಯಕ್ರಮವನ್ನು ಬಂದ್ ಮಾಡಬೇಕು. ಬಳಿಕ 15 ನಿಮಿಷದಲ್ಲಿ ಅಂದರೆ 12:20ಕ್ಕೆ ಕಾರ್ಯಕ್ರಮ ಆಯೋಜಕರು ಸಂಪೂರ್ಣವಾಗಿ ತೆರವು ಮಾಡಬೇಕೆಂದು ಪೊಲೀಸರು ಸೂಚಿಸಿರುವ ನಿಯಮ ತಪ್ಪಿದರೆ ಮುಲಾಜಿಲ್ಲದೆ ಪೊಲೀಸ್ ಕ್ರಮ ಕೈಗೊಳ್ಳಲಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇಷ್ಟು ಮಾತ್ರವಲ್ಲದೆ ಪಾರ್ಟಿ ನೆಪದಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸಿದರೆ ಹುಷಾರ್ ಎಂದಿರುವ ಕಮಿಷನರ್, ಮಂಗಳೂರಿನ ಎಲ್ಲಾ ಪಾರ್ಟಿಗಳಿಗೆ ಮಹಿಳಾ ಸುರಕ್ಷಾ ಸಿಬ್ಬಂದಿಯನ್ನು ನೇಮಿಸುವಂತೆ ಆಯೋಜಕರಿಗೆ ಸೂಚಿಸಿದ್ದಾರೆ.
ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಶುಭಕೋರುವ ನೆಪದಲ್ಲಿ ಕೀಟಲೆ, ಅಸಭ್ಯವಾಗಿ ವರ್ತಿಸುವುದನ್ನು ತಡೆಯಲು ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಬಗ್ಗೆ ನಿಗಾವಹಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಲಾಗಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ಹಿಂಸಾಚಾರ ನಡೆದಿರುವುದರಿಂದ ಪೊಲೀಸ್ ಇಲಾಖೆ ಈ ಬಾರಿಯ ಹೊಸ ವರ್ಷ ಆಚರಣೆಗೆ ಹದ್ದಿನ ಕಣ್ಣು ಇಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos