ಜಿಯೋದಿಂದ ಹೊಸ ಸೇವೆ

ಜಿಯೋದಿಂದ ಹೊಸ ಸೇವೆ

ಬೆಂಗಳೂರು, ಡಿ. 16: ಕಳೆದ ಕೆಲ ತಿಂಗಳಿಂದ ಮೊಬೈಲ್ ಬಳಕೆದಾರರು ನಿಧಾನಗತಿಯ ನೆಟ್ವರ್ಕ್ ಸೇವೆಯಿಂದ ಗ್ರಾಹಕರು ರೋಸಿ ಹೋಗಿದ್ದಾರೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಒಂದು ಕರೆ ಕನೆಕ್ಟ್ ಆಗಲು ಹಲವು ಬಾರಿ ಕಾಲ್ ಮಾಡಬೇಕೆಂಬ ದೂರುಗಳು ಕೇಳಿ ಬರುತ್ತಿವೆ.

ಇಂತಹ ಸಮಯದಲ್ಲೇ ದೇಶದಲ್ಲಿ ಹೊಸ ಸೇವೆಯನ್ನು ಪ್ರಾರಂಭಿಸಲು ಮೊಬೈಲ್ ಕಂಪೆನಿಗಳು ಮುಂದಾಗುತ್ತಿದೆ. ಕೆಲದಿನಗಳ ಹಿಂದೆ ಭಾರ್ತಿ ಏರ್ಟೆಲ್ ತನ್ನ ಬಳಕೆದಾರರಿಗೆ ವೈಫೈ ಅಡಿಯಲ್ಲಿ ಕರೆ ಮಾಡಲು ಸಾಧ್ಯವಾಗುವಂತಹ ಹೊಸ ಸೌಲಭ್ಯವನ್ನು ಪ್ರಸ್ತುತಪಡಿಸುವುದಾಗಿ ತಿಳಿಸಿತ್ತು.

ಇದೀಗ ಜಿಯೋ ಟೆಲಿಕಾಂ ಕಂಪೆನಿ ಕೂಡ ವಾಯ್ಸ್ ಓವರ್ ವೈ-ಫೈ  ಸೇವೆ ಒದಗಿಸಲು ಸಕಲ ತಯಾರಿಯಲ್ಲಿದೆ. ಮಹಾರಾಷ್ಟ್ರದಲ್ಲಿ ವೋ-ಫೈ ಪರೀಕ್ಷೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಜಿಯೋ ಈ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos