ನಮ್ಮ ಮೆಟ್ರೋದಲ್ಲಿ ಮಹಿಳೆಯರ ಸುರಕ್ಷತೆಗೆ ಹೊಸ ಕ್ರಮ

ನಮ್ಮ ಮೆಟ್ರೋದಲ್ಲಿ ಮಹಿಳೆಯರ ಸುರಕ್ಷತೆಗೆ ಹೊಸ ಕ್ರಮ

ಬೆಂಗಳೂರು, ಡಿ. 3: ದೇಶದಲ್ಲಿ ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದ ಮಹಿಳೆಯರು ಧೈರ್ಯವಾಗಿ ಓಡಾಡಲು ಆತಂಕ ಪಡುವ ಸ್ಥಿತಿ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹಿಳೆಯರು ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳಲು ಅವಕಾಶ ನೀಡುವ ಸಲುವಾಗಿ ಮೆಟ್ರೋದಲ್ಲಿ ಓಡಾಡುವ ಮಹಿಳೆಯರಿಗೆ ಪೆಪ್ಪರ್ ಸ್ಪ್ರೇ ಕೊಂಡೊಯ್ಯಲು ಬಿಎಂಆರ್ಸಿಎಲ್ ಅವಕಾಶ ಕಲ್ಪಿಸಿದೆ. ಈ ಬಗ್ಗೆ ನೆನ್ನೆ ಆದೇಶ ಹೊರಡಿಸಿರುವ ಬಿಎಂಆರ್ಸಿಎಲ್ ಮೆಟ್ರೋ ಸ್ಟೇಷನ್ಗಳಲ್ಲಿ ಮಹಿಳೆಯರಿಗೆ ಪೆಪ್ಪರ್ ಸ್ಪ್ರೇಗಳನ್ನು ಕೊಂಡೊಯ್ಯಲು ಅವಕಾಶ ನೀಡಬೇಕು ಎಂದು ಸೂಚಿಸಿದೆ.

ಮೆಟ್ರೋ ನಿಲ್ದಾಣದೊಳಗೆ ಯಾವುದೇ ಅಪಾಯಕಾರಿ ಅಥವಾ ಸ್ಫೋಟಕ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಹಾಗೇನಾದರೂ ಹರಿತವಾದ ವಸ್ತು, ಅಪಾಯಕಾರಿ ವಸ್ತುಗಳನ್ನು ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದರೆ ತಪಾಸಣೆ ಮಾಡುವಾಗಲೇ ಅದನ್ನು ತೆಗೆದಿಟ್ಟುಕೊಳ್ಳಲಾಗುತ್ತದೆ. ಆದರೆ, ಪೆಪ್ಪರ್ ಸ್ಪ್ರೇ ಕೊಂಡೊಯ್ಯಲು ಮಹಿಳೆಯರಿಗೆ ವಿಶೇಷ ಅನುಮತಿ ನೀಡಲು ಬಿಎಂಆರ್ಸಿಎಲ್ ಸಂಸ್ಥೆ ಮುಂದಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos