ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರ

ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರ

ಆನೇಕಲ್, ಸೆ. 3: ಭಾರತ ಸರ್ವಧರ್ಮಗಳ ಸಮ್ಮಿಲನದ ಶ್ರೇಷ್ಠ ದೇಶ, ಹಲವಾರು ಭಾಷೆ ಸಂಸ್ಕೃತಿಗಳಿಂದ ಭಾರತ ನಿರ್ಮಾಣವಾಗಿದ್ದು, ವಿವಿಧತೆಯಲ್ಲಿ ಏಕತೆ ಕಾಣುತ್ತಿರುವ ಜಗತ್ತಿನ ಏಕೈಕ ರಾಷ್ಟ್ರವಾಗಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಎ.ನಾರಾಯಣಸ್ವಾಮಿ ಹೇಳಿದರು.

ಅವರು ತಾಲ್ಲೂಕಿನ ತಿಂಡ್ಲು ಗ್ರಾಮದಲ್ಲಿ  ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಚಿನ್ಮಯ ಸೇವಾ ಸಂಸ್ಥೆ ಶ್ರೀ ರಾಮಾಂಜನೇಯ ಭಕ್ತ ಮಂಡಳಿ ಹಾಗೂ  ಭಗತ್ ಸಿಂಗ್ ಯುವಸೇನೆ ಸಹಯೋಗದಲ್ಲಿ  ನಡೆದ ಈಶಾನ್ಯ ರಾಜ್ಯಗಳ ಹಾಗೂ ಕರ್ನಾಟಕ ರಾಜ್ಯದ ಕಲಾ ತಂಡಗಳಿಂದ ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಬೆಳಕು ಕಾಣದ ಅನೇಕ ಗ್ರಾಮಗಳು ಅಳಿವಿನಿ ಹಂಚಿನಲ್ಲಿದ್ದವು. ಆದರೆ,  ನರೆಂದ್ರ ಮೋದಿರವರು ದೇಶಕ್ಕೆ ಪ್ರಧಾನಿ ಆದ ಮೇಲೆ ದೇಶ ಅಭಿವೃದ್ದಿಯತ್ತಾ ಸಾಗುತ್ತಿದೆ. ಬೆಳಕು ಕಾಣದ ಎಷ್ಟೋಗ್ರಾಮಗಳಿಗೆ ರೈಲಿನ ಸೌಲಭ್ಯ, ವಿಮಾನ ನಿಲ್ದಾಣಗಳ ನಿರ್ಮಾಣ ಸೇರಿದಂತೆ ಮೂಲ ಭೂತ ಸೌಲಭ್ಯಗಳನ್ನು ನೀಡಿದ್ದಾರೆ ಎಂದು ಪ್ರಶಂಸೆ ವ್ಯಕ್ತ ಪಡಿಸಿದರು.

ರಾಷ್ಟ್ರೀಯ ಯುವ ಪ್ರಶಸ್ಥಿ ಪುರಸ್ಕೃತ ಡಾ. ಚಿನ್ನಪ್ಪ ಚಿಕ್ಕಹಾಗಡೆ ಮಾತನಾಡಿ, ನಾವು ನಮ್ಮ ನೆಲದ ಬಗ್ಗೆ ವಿಶೇಷ ಪ್ರೀತಿ ಹೊಂದಬೇಕು. ಆದರೆ, ಅದು ಮಾಯವಾಗುತ್ತಿದ್ದು, ದೇಶದ ಅಭಿವೃದ್ದಿಗೆ ಹಿನ್ನಡೆಯಾಗುತ್ತಿದೆ. ಭಾವೈಕ್ಯತೆ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಬಹುಬಾಷೆ ಸಂಸ್ಕೃತಿಗಳ ನೆಲೆಯಾದ ಭಾರತ ಶಾಂತಿಪ್ರಿಯ ರಾಷ್ಠವಾಗಿದೆ ನಮ್ಮೊಳಗಿನ ಈ ರಾಷ್ಟ್ರೀಯ ಬಾವೈಕ್ಯತೆನ್ನು ಪರಂಪರೆಯನ್ನು ನಾವೆಲ್ಲರೂ ಒಗ್ಗಟ್ಟಾಗಿ ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು.

ಆನೇಕಲ್ ಕ್ಷೇತ್ರದ ಜನರಲ್ಲಿ ದೇಶಪ್ರೇಮದ ಅರಿವು ಮೂಡಿಸಲು ಕಳೆದ ಮೂರು ದಿನಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ದೇಶದ ಮೂಲೆ ಮೂಲೆಯಿಂದ ಬಂದ ಕಲಾವಿದರು ಮೂರೇ ದಿನಕ್ಕೆ ನಮ್ಮ ಮತ್ತು ಅವರ ನಡುವೆ ಪರಸ್ಪರ ಸ್ನೇಹ ಸಂಬಂದನ ಉತ್ತಮವಾಗಿ ಬೆಳೆದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ ಶ್ರೀರಾಮಯ್ಯ, ಉಪಾಧ್ಯಕ್ಷೆ ರುಕ್ಮಿಣಿ ವೆಂಕಟೇಶ್ ಮತ್ತು ಪಂಚಾಯಿತಿ ಸದಸ್ಯರು. ಬಿಜೆಪಿ ಮುಖಂಡರಾದ ಪಿಎಲ್ ಡಿ ಆಂಜಿನಪ್ಪ, ಟಿ.ವಿ. ಬಾಬು, ರಾಜ್ಯ ಪ್ರಶಸ್ಥಿ ಪುರಸ್ಕೃತ ಮಹೇಶ್, ತಿಂಡ್ಲು ಸತೀಶ್ ಗೌಡ, ಶ್ರೀ ರಾಂಜನೇಯ ಭಕ್ತ ಮಂಡಳಿಯವರು ಮತ್ತು ಗ್ರಾಮಸ್ಥರು ಹಾಜರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos