ನಂದಿ ಗಿರಿಧಾಮ ಪ್ರವಾಸಿಗರಿಗೆ ಶಾಕ್!!

ನಂದಿ ಗಿರಿಧಾಮ ಪ್ರವಾಸಿಗರಿಗೆ ಶಾಕ್!!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ನೂ ಇಯರ್ ಆಚರಿಸಬೇಕು ಅಂದುಕೊಂಡಿದ್ದವರಿಗೆ ಆಸೆಗೆ ತಣ್ಣೀರ್‌ ಎರಚಿದಂತಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಪ್ರವಾಸಿಗರ ಕಣ್ಣು ಕೆಂಪಾಗಿದೆ. ನಂದಿ ಗಿರಿಧಾಮ ಪ್ರವಾಸಿಗರ ಹಾರ್ಟ್ ಫೇವರೆಟ್ ಜಾಗ. ಬಿಳ್ಳಿಮೋಡ, ಇಬ್ಬನಿ , ಹೆತ್ತ ನೋಡಿದರು ಮುತ್ತಿಕ್ಕುವ ಮಂಜು ಇಂತಹ ಪ್ರಕೃತಿ ಸಮಯದಲ್ಲಿ ಕುಳಿತು ಹೊಸ ವರ್ಷ ಸ್ವಾಗತಿಸೋಣ ಎಂದು ಪಾರ್ಟಿ ಪ್ರಿಯರು ಪ್ಲಾನ್ ಹಾಕಿಕೊಂಡಿದ್ದರು. ಆದರೆ ಚಿಕ್ಕಬಳ್ಳಾಪುರ ಜಿಲ್ಲೆ ಆಡಳಿತ ಮಾತ್ರ ಪಾಟಿ ಪ್ರಿಯರ ಕನಸಿಗೆ ತಣ್ಣೀರು ಎರಚಿದೆ. ನಂದಿ ಬೆಟ್ಟಕ್ಕೆ ಡಿಸೆಂಬರ್ 31 ಸಂಜೆ 6 ಗಂಟೆಯಿಂದ ಜನವರಿ1 ಬೆಳಗ್ಗೆ 6:00 ವರೆಗೆ ಸಾರ್ವಜನಿಕ ಪ್ರವೇಶ ನಿರ್ಬಂಧ ಹೇರಲಾಗಿದೆ. ಅತಿಥಿ ಗೃಹಗಳ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಹೊಸ ವರ್ಷ ಆಚರಣೆಯ ಕನಸು ಕಂಡಿದ್ದಂತಹ ಯುವ ಸಮುದಾಯ ನಿರಾಸೆಗೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos