ನಾಮಕಾವಸ್ತೆಯ ಕನ್ನಡ ಅಭಿವೃದ್ದಿ ಪ್ರಾಧಿಕಾರ

ನಾಮಕಾವಸ್ತೆಯ ಕನ್ನಡ ಅಭಿವೃದ್ದಿ ಪ್ರಾಧಿಕಾರ

ಬೆಂಗಳೂರು, ನ. 1: ಕನ್ನಡ ಭಾಷೆಯನ್ನು ಸರ್ಕಾರದ ಆಡಳಿತದಲ್ಲಿ ಸಂಪೂರ್ಣವಾಗಿ ಜಾರಿ ಮಾಡುವ ಹೊಣೆ ಹೊತ್ತಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ, ನೋಟೀಸ್ ನೀಡುವುದು ಬಿಟ್ಟರೆ ಯಾವುದೇ ಅಧಿಕಾರವಿಲ್ಲದ ನಾಮಕಾವಸ್ತೆಯ ಪ್ರಾಧಿಕಾರವಾಗಿದೆ.

ಹಲ್ಲುಕಿತ್ತ ಹಾವಿನಂತಾಗಿರುವ ಕನ್ನಡ ಅಭಿವೃದ್ದಿ ಪ್ರಾಧಿಕಾರ ಯಾವುದೇ ಅಧಿಕಾರವಿಲ್ಲದ ಅಸಹಾಯಕ ಎಂಬ ಕನ್ನಡ ಚಿಂತಕರ ಅಭಿಪ್ರಾಯವಾಗಿದೆ. ಆಡಳಿತದಲ್ಲಿ ಕನ್ನಡಭಾಷೆಯ ಬಳಕೆ ಕುರಿತು ಆರಂಭವಾದ ಚರ್ಚೆಯಲ್ಲಿ ಕೆಲ ಚಿಂತಕರು ಕನ್ನಡವನ್ನು ಬಳಸುವಂತೆ ಆಗಿಂದಾಗ್ಗೆ ಅನೇಕ ವರದಿಗಳು, ಸರ್ಕಾರದ ಸುತ್ತೊಲೆಗಳು ಹಾಗೂ ಆದೇಶಗಳಾಗಿವೆ. ಅದರೆ ಒಂದೂ ಜಾರಿಯಾಗಿಲ್ಲ.

ಆ ಪಕ್ಷ ಈ ಪಕ್ಷ ಎನ್ನದೇ ಸುತ್ತೊಲೆಗಳ ಅನುಷ್ಠಾನದಲ್ಲಿ ಎಲ್ಲ ಸರ್ಕಾರಗಳೂ ವಿಫಲವಾಗುತ್ತಲೇ ಬಂದಿವೆ. ಕನ್ನಡದಲ್ಲಿ ಕಡತ ಇಲ್ಲದಿದ್ದರೆ ಅದನ್ನು ವಾಪಸ್ ಕಳಿಸುವ ಇಚ್ಛಾಶಕ್ತಿಯೇ ಯಾವ ಆಡಳಿತ ಪಕ್ಷಗಳಿಗೂ, ಯಾರಲ್ಲೂ ಇಲ್ಲ. ಇನ್ನು ನ್ಯಾಯಾಂಗದಲ್ಲಿ ಪೂರ್ಣ ಪ್ರಮಾಣದಲ್ಲಿ ಕನ್ನಡ ಬಳಕೆ ಆಗುತ್ತಿಲ್ಲ. ಹೈಕೋರ್ಟ್, ಜಿಲ್ಲಾ ಕೋರ್ಟ್ ಬಿಡಿ, ತಾಲ್ಲೂಕು ಮಟ್ಟದ ಮ್ಯಾಜಿಸ್ಟೆಟ್  ಕೋರ್ಟ್ಗಳಲ್ಲಂತೂ ಎಲ್ಲ ವ್ಯವಹಾರ ಇಂಗ್ಲಿಷ್‌ನಲ್ಲೆ ನಡೆಯುತ್ತವೆ.ನ್ಯಾಯಾಲಯಗಳನ್ನು ಪ್ರಶ್ನೆ ಮಾಡುವವರು ಯಾರು?

ಕನ್ನಡ ಸಂಸ್ಕೃತಿ ಇಲಾಖೆ ಸಚಿವರು ಮತ್ತು ಕಾನೂನು ಸಂಸದೀಯ ವ್ಯವಹಾರಗಳ ಸಚಿವರಾದಂತಹವರಿಗೆ ಕನ್ನಡ ಪರ ಕಾಳಜಿಯೇ ಇರುವುದಿಲ್ಲ. ಅಧಿಕಾರಕ್ಕೆ ಬರುವ ಮುನ್ನ ಕನ್ನಡ ಹೋರಾಟಗಾರರನ್ನು ಕನ್ನಡ ಪರ ಚಿಂತಕರನ್ನು ಮೆಚ್ಚಿಸಲು ಕನ್ನಡ ಪರ ಮಾತನಾಡುವ ರಾಜಕಾರಣಿಗಳು ಅಧಿಕಾರಕ್ಕೆ ಬಂದ ನಂತರ ಕನ್ನಡವನ್ನೆ ಮರೆತು ಐಎಎಸ್ ಅಧಿಕಾರಿಗಳ ಕೈಗೊಂಬೆಯಾಗಿಬಿಡುತ್ತಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಬಂದು ಅವಲೋಕನ ಮಾಡಿದರೆ ಇದಕ್ಕೆಲ್ಲ ಜನಸಾಮಾನ್ಯರ ಅಭಿಮಾನಶೂನ್ಯತೆಯೂ ಕಾರಣ ಎನ್ನಲಾಗುತ್ತಿದೆ. ಶುದ್ಧ ಕನ್ನಡ ಮಾತನಾಡಿದರೆ ಬೆಂಗಳೂರಿಗರಿಗೆ ಅರ್ಥವಾಗುತ್ತದೆಯೇ? ಇಲ್ಲಿಯವರಿಗೆ ಬೇಕಿರುವುದು ಕಾಕ್‌ಟೇಲ್ ಕನ್ನಡ. ಕನ್ನಡಕ್ಕೆ ಭವಿಷ್ಯವಿಲ್ಲ ಎಂಬ ಭಾವನೆ ಇಲ್ಲಿನ ಜನರಲ್ಲಿ ಆಳವಾಗಿ ಬೇರೂರಿದೆ.

ಮಕ್ಕಳು ಇಂಗ್ಲಿಷ್‌ನಲ್ಲಿ ಓದಿದರೆ ಮಾತ್ರ ಜೀವನ ರೂಪಿಸಿಕೊಳ್ಳುತ್ತಾರೆ ಎಂಬ ಕಾರಣಕ್ಕೆ, ಯಾವುದೇ ಮೂಲಸೌಕರ್ಯ, ಶಿಕ್ಷಕರು, ಗುಣಮಟ್ಟ ಇಲ್ಲದ ಕಾನ್ವೆಂಟ್‌ಗಳಿಗೆ ಸೇರಿಸುತ್ತಾರೆ.

ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಮುಂದಿನ ಪೀಳಿಗೆ ಕನ್ನಡವನ್ನು ಮನೆಮಾತಾಗಿಯೂ ಉಳಿಸಿಕೊಳ್ಳಲು ಸಾದ್ಯವೇ ಎಂಬ ಆತಂಕ ಕಾಡುತ್ತಿದೆ. ರಾಜಕಾರಣಿಗಳಿಗೆ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಭಿವೃದ್ದಿ ಬೇಕಿಲ್ಲ ಅನುದಾನ ಬಿಡುಗಡೆ ಮಾಡುತ್ತಿಲ್ಲ ನಾಮಕಾವಸ್ತೆಗೆ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ಮಾಡಿ ಕಾರು ಟಿಎ,ಡಿಎ. ನೀಡಲಾಗುತ್ತದೆ ಆದರೆ ಕನ್ನಡ ಪರ ಕೆಲಸಗಳಾಗುತ್ತಿಲ್ಲ.ಹೆಸರಿಗಷ್ಟೆ ಪ್ರಾಧಿಕಾರ ರಚನೆ ಮಾಡಲಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕನ್ನಡ ಪ್ರಾಧಿಕಾರವನ್ನು ಮುಚ್ಚುವ ತಂತ್ರಗಾರಿಕೆಯಲ್ಲಿ ತೊಡಗಿದೆಯಾ? ಎಂಬ ಅನುಮಾನ ಕಾಡುತ್ತಿದೆ.

4೦ ವರ್ಷದಿಂದ ಆಡಳಿತದಲ್ಲಿದ್ದೆನೆ. 2-3 ದಶಕದ ಹಿಂದೆ ಎಲ್ಲವೂ ಇಂಗ್ಲಿಷ್ ಮಯವಾಗಿತ್ತು. ತಾಲ್ಲೂಕು ಮಟ್ಟದ ವ್ಯವಹಾರಗಳೂ ಇಂಗ್ಲಿಷ್‌ನಲ್ಲೆ ನಡೆಯುತ್ತಿದ್ದವು. ಈಗ ಸಾಕಷ್ಟು ಬದಲಾವಣೆ ಆಗಿದೆ. ತಾಲ್ಲೂಕು ಮಟ್ಟದಲ್ಲಿ ಶೇ.100, ಜಿಲ್ಲಾ ಮಟ್ಟದಲ್ಲಿ ಶೇ.90-95 ಕನ್ನಡ ಬಳಕೆ ಆಗುತ್ತಿದೆ. ರಾಜ್ಯಮಟ್ಟದಲ್ಲೂ ಸಾಕಷ್ಟು ಉತ್ತಮ ಬದಲಾವಣೆಯ ಅಂಶಗಳಿವೆ. ಅನೇಕ ಅಧಿಕಾರಿಗಳು ಕನ್ನಡದಲ್ಲೆ ವ್ಯವಹರಿಸುತ್ತಿದ್ದು, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಂತೂ ಕಡvಗಳು ಕನ್ನಡದಲ್ಲಿ ಇರದಿದ್ದರೆ ವಾಪಸ್ ಕಳಿಸುತ್ತಿದ್ದಾರೆ.

ಪ್ರಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೇವಲ ನೋಟಿಸ್ ನೀಡಲಷ್ಟೆ ಶಕ್ತ. ಯಾವುದೇ ಅಧಿಕಾರಿ ಕನ್ನಡ ಬಳಸದಿದ್ದರೆ ಒಮ್ಮೆ ನೋಟಿಸ್ ನೀಡಬಹುದು. ಮತ್ತೊಮ್ಮೆ ತಪ್ಪು ಮಾಡಿದರೆ, ಮೇಲಧಿಕಾರಿ ಗಮನಕ್ಕೆ ತರಬಹುದು. ಸಂಚಾರ ಪೊಲೀಸರು ದಂಡ ವಿಧಿಸುತ್ತಾರೆ ಎಂಬ ಭಯವಿದ್ದಾಗ ಸಂಚಾರ ನಿಯಮ ಪಾಲನೆ ಆಗುವಂತೆಯೇ ಪ್ರಾಧಿಕಾರಕ್ಕೆ ಅಧಿಕಾರ ನೀಡಬೇಕು.

 

ಫ್ರೆಶ್ ನ್ಯೂಸ್

Latest Posts

Featured Videos