ನಾಳೆ  ಕಾಂಗ್ರೆಸ್ ರ‍್ಯಾಲಿ

ನಾಳೆ  ಕಾಂಗ್ರೆಸ್ ರ‍್ಯಾಲಿ

ಬೆಂಗಳೂರು, ಸೆ. 10 : ನಾಳೆ ನಗರದಲ್ಲಿ ಕಾಂಗ್ರೆಸ್  ಪಕ್ಷದ ವತಿಯಿಂದ ಬೃಹತ ಪ್ರತಿಭಟನ ರ‍್ಯಾಲಿ ಹಮ್ಮಿಕೊಂಡಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಇಡಿ ಬಂಧನ ವಿರೋಧಿಸಿ ಮಾತನಾಡಿ, ಕಾಂಗ್ರೆಸ್ ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರ  ಜಾರಿ ನಿರ್ದೇನಾಲಯ ಬಂಧನ ವಿರೋಧಿಸಿ ನಾಳೆ  ನ್ಯಾಷನಲ್ ಕಾಲೇಜಿನಿಂದ ಪ್ರಿÃಡಂ ಪಾರ್ಕ ವರೆಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ರ‍್ಯಾಲಿ ನಡೆಸಲ್ಲಿದ್ದಾರೆ.  ಶಾಂತಿಯುತ ಪ್ರತಿಭಟನೆ ನಡೆಯಲಿದೆ. ಎಲ್ಲಾ ಕಾರ್ಯಕರ್ತರಿಗೆ  ಮುಖಂಡರಿಗೂ ಸೂಚನೆ ನೀಡಿದ್ದೆÃವೆ. ಕೇಂದ್ರ ಬಿಜೆಪಿ ಸರ್ಕಾರ ಪ್ರತಿ ಪಕ್ಷಗಳನ್ನು ಮುಗಿಸುವ ಕೆಲಸ ಮಾಡುತ್ತಿದೆ ಎಂದು ಗುಡುಗಿದರು. ಆದಾಯ ತೆರಿಗೆ ಇಲಾಖೆ, ಇಡಿ ಸಿಬಿಐ ಎಲ್ಲವೂ ಕೇಂದ್ರದ ಮುಷ್ಠಿಯಲ್ಲಿವೆ. ಕೇಂದ್ರ ಸರ್ಕಾರ ದುರುದ್ದೆÃಶದಿಂದ ಡಿಕೆ ಶಿವಕುಮಾರ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು. ದೆಹಲಿ ಪ್ಲಾಟ್ ನಲ್ಲಿ ಆದಾಯ ತೆರಿಗೆ ದಾಳಿ ಸಂದರ್ಭದಲ್ಲಿ ಸಿಕ್ಕ ೮.೫ ಕೋಟಿ ಹಣ ತಮ್ಮದು ಎಂದು ಸುನೀಲ್ ಶರ್ಮಾ ಅವರೇ ಒಪ್ಪಿಕೊಂಡಿದ್ದಾರೆ. ಡಿಕೆ ಶಿವಕುಮಾರ ಅವರಿಗೆ ಸೇರಿದ ಹಣ ಎಂದು ಕಸ್ಟಡಿಗೆ ತೆಗೆದುಕೊಂಡಿರುವುದು ಸರಿಯಲ್ಲ. ಇದು ಮುಂದೊಂದಿನ ಅವರಿಗೆ ಶಾಪವಾಗಲಿದೆ ಎಂದಿ ಎಚ್ಚರಿಕೆ ನೀಡಿದರು.

ಕೇಂದ್ರ ಸರ್ಕಾರ ಒಂದು ಪೈಸೆ ನೀಡಿಲ್ಲ : ಪ್ರವಾಹ ಸಂತ್ರಸ್ತರಿಗೆ ಕೇಂದ್ರ ನರೇಂದ್ರ ಮೋದಿ ಸರ್ಕಾರ ಇತ್ತಿÃಚಿಗೆ ಬೆಂಗಳೂರಿಗೆ ಆಗಮಿಸಿ ಹಾಗೇ ಹೋಗೀದ್ದಾರೆ. ಪ್ರವಾಸದಿಂದ ಸಾವಿರಾರು ಸಂತ್ರಸ್ತರಿಗೆ ನಷ್ಟ ಸಂಭವಿಸಿದೆ. ಅನ್ನ, ನೀರಿಲ್ಲದೆ ಬೀದಿಗೆ ಬಿದ್ದಿದ್ದಾರೆ. ಕೇಂದ್ರ ಸರ್ಕಾರ ಒಂದು ನೆರೆ ನೀಡಿಲ್ಲ ಎಂದು ದೂರಿದರು.

 

ಫ್ರೆಶ್ ನ್ಯೂಸ್

Latest Posts

Featured Videos