ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಮಾಡಿಸಲು ಯತ್ನಿಸಿದ ವ್ಯಕ್ತಿಯ ಬಂಧನ

ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಮಾಡಿಸಲು ಯತ್ನಿಸಿದ ವ್ಯಕ್ತಿಯ ಬಂಧನ

ಮೈಸೂರು, ಏ. 30, ನ್ಯೂಸ್ ಎಕ್ಸ್ ಪ್ರೆಸ್:  ನಿವೇಶನ ಸಂಬಂಧ ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಮಾಡಲು ಯತ್ನಿಸಿದ ವ್ಯಕ್ತಿಯನ್ನು ನೋಂದಣಿ ಅಧಿಕಾರಿಗಳು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ನಿವೇಶನ ಸಂಬಂಧ ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ದಕ್ಷಿಣ ನೋಂದಣಿ ಕಚೇರಿಯಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ ನಿವೇಶನವೊಂದರ ನಕಲಿ ದಾಖಲೆ ಸೃಷ್ಟಿಸಿ ಮಧ್ಯವರ್ತಿಗಳ ಮೂಲಕ ನೋಂದಣಿ ಮಾಡಿಸಲು ಬಂದ ವ್ಯಕ್ತಿಯನ್ನು ನೋಂದಣಿ ಅಧಿಕಾರಿಗಳು ಅನುಮಾನಗೊಂಡು ವಿಚಾರಿಸಿದಾಗ ಸರಿಯಾದ ದಾಖಲೆ ನೀಡಲು ತಡಬಡಿಸಿದ್ದಾನೆ. ತಕ್ಷಣ ಪೊಲೀಸರಿಗೆ ಕರೆ ಮಾಡಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದು, ಕುವೆಂಪು ನಗರ ಪೊಲೀಸರು ಆತನನ್ನು ರಾತ್ರಿವರೆಗೆ ಸಬ್ ರಿಜಿಸ್ಟ್ರಾರ್​​ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದಾರೆ. ನಂತರ ಠಾಣೆಗೆ ಕರೆದೊಯ್ದು ಇಂದು ಸಹ ತನಿಖೆ ಮುಂದುವರೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos