ಜೈ ಶ್ರೀರಾಮ್ ಹೇಳದ ಮುಸ್ಲಿಂಗೆ ಥಳಿತ

ಜೈ ಶ್ರೀರಾಮ್ ಹೇಳದ ಮುಸ್ಲಿಂಗೆ ಥಳಿತ

ಥಾನೆ, ಜೂ, 28: ಕಾಲಾ ಎಷ್ಟೆ ಮುಂದು ವರೆದರು ಕೂಡ ಜಾತಿ ಬೇದ ಬಾವ ಮಾತ್ರ ಜಗತ್ತಿನಲ್ಲಿ ಇನ್ನು ಕಡಿಮೆಯಾಗಿಲ್ಲ.  ಹೌದು, ಮಹಾರಾಷ್ಟ್ರದ ಥಾನೆಯಲ್ಲಿ  ಜೈ ಶ್ರೀರಾಮ್ ಉಚ್ಛಾರ ಕುರಿತು ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಮುಸ್ಲಿಂ ಕ್ಯಾಬ್ ಚಾಲಕನಿಗೆ ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿ ಥಳಿಸಿರುವ ಘಟನೆ ನಡೆದಿದೆ.

ಜೈ ಶ್ರೀರಾಮ್ ಎಂದು ಹೇಳುವಂತೆ ಚಾಲಕನಿಗೆ 3 ಜನರು ಒತ್ತಾಯಿಸಿದ್ದರು ಆದರೆ ಚಾಲಕ ಹೇಳಲು ಒಪ್ಪದ ಕಾರಣ 3 ಜನರು ಸೇರಿಕೊಂದು ಥಳಿಸಿದ್ದರು, ಈ ಕುರಿತು ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಅವರ ವಿರುದ್ಧ ಐಪಿಸಿ ಸೆಕ್ಷನ್ 295( ಧಾರ್ಮಿಕ ಭಾವನೆಗಳಿಗೆ ಧಕ್ಕೆ) , 392(ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಒಟ್ಟು ನಾಲ್ಕೈದು ಮಂದಿಯ ಜತೆ ಜಗಳ ನಡೆದಿತ್ತು, ಜೈ ಶ್ರೀರಾಮ್ ಎಂದು ಹೇಳಲಿಲ್ಲ ಎಂದು ಥಳಿಸಿದ್ದಾರೆ ಎಂದು ಕ್ಯಾಬ್ ಚಾಲಕ ಫೈಜಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ನಾನು ಮುಸ್ಲಿಂ ಎಂದು ತಿಳಿದು ಅವರು ಈ ರೀತಿ ಮಾಡಿದ್ದಾರೆ.

ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ಇನ್ನುಳಿದವರ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos