ಮೋದಿ, ಶಾ ಇರುದ್ಧ ರಾಹುಲ್ ಕಿಡಿ

ಮೋದಿ, ಶಾ ಇರುದ್ಧ ರಾಹುಲ್ ಕಿಡಿ

ನವದೆಹಲಿ, ಡಿ . 23 : ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಮುಂದಾದ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ರಾಹುಲ್ ಗಾಂಧಿ, ಆತ್ಮೀಯ ಯುವಕರೇ, ಮೋದಿ ಮತ್ತು ಅಮಿತ್ ಶಾ ನಿಮ್ಮ ಭವಿಷ್ಯವನ್ನು ಹಾಳು ಮಾಡಿದ್ದಾರೆ. ಉದ್ಯೋಗದಿಂದ ವಂಚಿತರಾಗಿದ್ದಕ್ಕೆ ಹಾಗೂ ಆರ್ಥಿಕತೆಯನ್ನು ಹಾಳು ಮಾಡಿದ್ದಕ್ಕೆ ನೀವು ತೋರುತ್ತಿರುವ ಆಕ್ರೋಶವನ್ನು ತಡೆದುಕೊಳ್ಳುವ ಶಕ್ತಿ ಅವರಿಗಿಲ್ಲ. ಹೀಗಾಗಿ ನಮ್ಮ ಪ್ರೀತಿಯ ಭಾರತವನ್ನು ಒಡೆಯುತ್ತಿದ್ದಾರೆ.

ಈ ಮೂಲಕ ವಿರೋಧದಿಂದ ತಪ್ಪಿಸಿಕೊಳ್ಳಲು ನೋಡುತ್ತಿದ್ದಾರೆ. ಆದರೆ ಪ್ರತಿಯೊಬ್ಬ ಭಾರತೀಯನನ್ನು ಪ್ರೀತಿಸುವ ಮೂಲಕ ನಾವು ಅವರನ್ನು ಸೋಲಿಸಬಹುದಾಗಿದೆ ಎಂದು ಯುವಕರಿಗೆ ಕರೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos