ಪಿಯು ಕಾಲೇಜಿಗೆ ಶಾಸಕರ ಭೇಟಿ

  • In State
  • January 5, 2021
  • 226 Views
ಪಿಯು ಕಾಲೇಜಿಗೆ ಶಾಸಕರ ಭೇಟಿ

ಚಾಮರಾಜನಗರ: ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಹಾಗೂ ಸರಕಾರಿ ಪ್ರೌಢಶಾಲೆಗೆ ಸೋಮವಾರ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿನೀಡಿ, ಶಾಲಾಕಾಲೇಜು ವಿದ್ಯಾರ್ಥಿನಿಯರನ್ನು ಆವರಣದಲ್ಲಿ ಗುಲಾಬಿ ಹೂವನ್ನು ನೀಡಿ, ಬರಮಾಡಿಕೊಂಡರು.
ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಒಬ್ಬೊಬ್ಬರಾಗಿ ತರಗತಿಗೆ ತೆರಳಿದರು.
ಇದೇವೇಳೆ ಶಾಸಕರು, ತರಗತಿಕೊಠಡಿಗಳಿಗೆ ಭೇಟಿನೀಡಿ, ಪಾಠಪ್ರವಚನ, ಕೋವಿಡ್ ಸಂಬಂಧ ಮುಂಜಾಗರೂಕ ಕ್ರಮಗಳ ಕುರಿತು ಪರಿಶೀಲಿಸಿದರು.
ನಂತರ ಪ್ರಾಂಶುಪಾಲರ ಕಚೇರಿಯಲ್ಲಿ ಕುಳಿತ ಶಾಸಕರು ಶಾಲಾಕಾಲೇಜಿಗೆ ಬೇಕಾದ ಮೂಲಸೌಕರ್ಯ ಒದಗಿಸುವುದು, ಶಿಕ್ಷಕರು ಮತ್ತು ಉಪನ್ಯಾಸಕರ ಹುದ್ದೆಗಳ ಮಾಹಿತಿ, ಶಾಲೆಗೆ ಸುತ್ತುಗೋಡೆ, ಶೌಚಾಲಯ, ಕೊಠಡಿಗಳ ಕುರಿತು ಮಾಹಿತಿ ಪಡೆದರು.
ನಗರಸಭೆ ಸದಸ್ಯ ಎಂ.ಮಹೇಶ್, ಪ್ರಾಂಶುಪಾಲ ಮರಿಸ್ವಾಮಿ, ಬಿಇಒ ಲಕ್ಷ್ಮೀಪತಿ, ಶಿಕ್ಷಣಸಂಯೋಜಕ ಸಿದ್ದಮಲ್ಲಪ್ಪ, ಉಪನ್ಯಾಸಕರು, ಮುಖ್ಯಶಿಕ್ಷಕ, ಸಹಶಿಕ್ಷಕರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos