‘ದೇವರಿಗೇ ನಮ್ಮ ಆಕಾಂಕ್ಷೆಗಳನ್ನು ಪೂರೈಸಲು ಸಾಧ್ಯವಿಲ್ಲ, ಸಂಸದನಿಗೆ ಸಾಧ್ಯವೇ?’ ಕೇಂದ್ರ ಸಚಿವ

‘ದೇವರಿಗೇ ನಮ್ಮ ಆಕಾಂಕ್ಷೆಗಳನ್ನು ಪೂರೈಸಲು ಸಾಧ್ಯವಿಲ್ಲ, ಸಂಸದನಿಗೆ ಸಾಧ್ಯವೇ?’ ಕೇಂದ್ರ ಸಚಿವ

ಬುಲಂದ್ ಶಹರ್, ಮಾ.16, ನ್ಯೂಸ್ ಎಕ್ಸ್ ಪ್ರೆಸ್: “ದೇವರಿಗೇ ಜನರ ಆಸೆ ಆಕಾಂಕ್ಷೆಗಳನ್ನು ಈಡೇರಿಸಲು ಸಾಧ್ಯವಿಲ್ಲದೇ ಇರುವಾಗ ಸಂಸದನೊಬ್ಬನಿಗೆ ಹೇಗೆ ಸಾಧ್ಯ?” ಎಂದು ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆಯ ರಾಜ್ಯ ಸಚಿವ ಮಹೇಶ್ ಶರ್ಮ ಪ್ರಶ್ನಿಸಿದ್ದಾರೆ.

“ದೇವರು ಅತ್ಯಂತ ದೊಡ್ಡ ಮೂರ್ಖ. ದೇವರು ನಮ್ಮನ್ನು ಈ ಲೋಕಕ್ಕೆ ಕಳುಹಿಸಿದ ನಂತರ ನಮಗೆ ಅನ್ನ, ಆಹಾರ, ಆಶ್ರಯ, ಉದ್ಯೋಗ ಹಾಗೂ ನಮ್ಮ ಮಕ್ಕಳಿಗೆ ಶಿಕ್ಷಣವೊದಗಿಸುವುದು ಆತನ ಜವಾಬ್ದಾರಿ. ಇಂದು ಕೂಡ ಉತ್ತರ ಪ್ರದೇಶದ ಬಲ್ಲಿಯಾ ಸೇರಿದಂತೆ ಪೂರ್ವ ಉತ್ತರ ಪ್ರದೇಶದ ಜನರಿಗೆ ಸಾಕಷ್ಟು ಆಹಾರ ದೊರಕುತ್ತಿಲ್ಲ. ಮಕ್ಕಳು ಶಾಲೆಗೆ ಹೋದಾಗ ಮಧ್ಯಾಹ್ನದ ಬಿಸಿಯೂಟದ ಮೂಲಕ ತಮ್ಮ ಹೊಟ್ಟೆ ತುಂಬಿಸುತ್ತಾರೆ. ಉಳಿದವರು ಹಸಿದೇ ಉಳಿಯುತ್ತಾರೆ. ನಮ್ಮನ್ನು ಸೃಷ್ಟಿಸಿದ ದೇವರಿಗೇ ನಮ್ಮ ಅಗತ್ಯಗಳನ್ನು ಪೂರೈಸಲು ಅಸಾಧ್ಯಾವಾದಾಗ ಎಂಪಿಯೊಬ್ಬನಿಗೆ ಸಾಧ್ಯವೇ?” ಎಂದು ಮಾರ್ಚ್ 14ರಂದು ಭಜನ್ ಲಾಲ್ ದೇವಸ್ಥಾನದ ಸಮೀಪ ನಡೆದ ಈ ರ್ಯಾಲಿಯಲ್ಲಿ ಶರ್ಮ ಪ್ರಶ್ನಿಸಿದ್ದಾರೆ.

ಶರ್ಮ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ಸಂಸದರಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos