ವಸೂಲಿ ಕೆಂದ್ರಗಳಾಗುತ್ತಿವೆ ಮೆಟ್ರೊ ಪಾರ್ಕಿಂಗ್ ಗಳು

ವಸೂಲಿ ಕೆಂದ್ರಗಳಾಗುತ್ತಿವೆ ಮೆಟ್ರೊ ಪಾರ್ಕಿಂಗ್ ಗಳು

ಬೆಂಗಳೂರು, ಅ. 25: ನಗರದ ಮೆಟ್ರೊ ನಿಲ್ದಾಣಗಳಾದ ಯಲಚೇನಹಳ್ಳಿ, ಯಶವಂತಪುರ, ವಿಜಯನಗರ ಸೇರಿದಂತೆ ಸುತ್ತಮುತ್ತಲಿನ ಖಾಲಿ ಜಾಗಗಳು ಹಣ ವಸೂಲಿಯ ಪಾರ್ಕಿಂಗ್ ಸೆಂಟರ್‌ಗಳಾಗಿ ಬದಲಾಗುತ್ತಿವೆ.

ವಾಹನ ಸವಾರರಿಂದ ನಿಲುಗಡೆ ಶುಲ್ಕ ಪಡೆಯುತ್ತಿವ ವಸೂಲಿ ಕೇಂದ್ರಗಳಾಗುತ್ತಿವೆ. ಪಾರ್ಕಿಂಗ್ ಮಾಡಲು ಅವಕಾಶ ನೀಡುವುದು ಒಂದು ಅಧಿಕೃತ ಉದ್ಯಮವಾಗಿ ಬದಲಾಗಿದ್ದರೆ, ಮತ್ತೊಂದು ಕಡೆ ಅಕ್ರಮವಾಗಿ ಹಣ ಸಂಪಾದನೆ ಮಾಡುವ ವಾಮ ಮಾರ್ಗವಾಗಿ ಬದಲಾಗುತ್ತಿವೆ. ಮೆಟ್ರೋ ನಿಲ್ದಾಣಗಳಲ್ಲಿ ವಾಹನ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇದೆ. ಸಾರ್ವಜನಿಕರಿಗೆ ಈ ಪಾರ್ಕಿಂಗ್ ಸೌಲಭ್ಯದಿಂದ ಅನುಕೂಲವೂ ಆಗಿದೆ.

ಯಲಚೇನಹಳ್ಳಿ, ಯಶವಂತಪುರ, ವಿಜಯನಗರ ಮೆಟ್ರೋ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾರ್ಕಿಂಗ್ ಸ್ಥಳಾವಕಾಸಕ್ಕೆ ಜಾಗ ನೀಡುವುದಕ್ಕೆ ಸ್ಥಳೀಯ ಖಾಸಗಿ ಮಾಲೀಕರು ಸ್ಪರ್ಧೆಗೆ ಇಳಿದಿದ್ದಾರೆ. ಮೆಟ್ರೋ ನಿಗಮವು ಅಧಿಕೃತವಾಗಿ ಪಾರ್ಕಿಂಗ್ ಶುಲ್ಕ ಪಡೆಯುವುದಕ್ಕೆ ಟೆಂಡರ್ ಪ್ರಕ್ರಿಯೆಯ ಮೂಲಕ ಅವಕಾಶ ನೀಡಿದೆ. ಕೆಲವು ಮಾಲೀಕರು ಮನಸೋ ಇಚ್ಛೆ ದರ ನಿಗದಿ ಮಾಡಿ ವಸೂಲಿಗಿಳಿದ್ದಾರೆ.

ಅನಧಿಕೃತ ಪಾರ್ಕಿಂಗ್

ಯಲಚೇನಹಳ್ಳಿಯ ಮೆಟ್ರೋದ ಅಧಿಕೃತ ಪಾರ್ಕಿಂಗ್ ಪ್ರದೇಶದಲ್ಲಿ ಮೂರು ಭಾಗವಾಗಿ ವಿಂಗಡಿಸಲಾಗಿದ್ದು, ಮೊದಲ ಮತ್ತು ಮೂರನೇ ಭಾಗವನ್ನು ಬೆಳವಾಡಿ ಎನ್ನುವವರಿಗೆ ಟೆಂಡರ್ ಪ್ರಕ್ರಿಯೆ ಮೂಲಕ ಮೆಟ್ರೋ ಸಂಸ್ಥೆ ಪಾರ್ಕಿಂಗ್ ಸೆಂಟರ್ ತೆರೆಯುವುದಕ್ಕೆ ಅವಕಾಶ ಕಲ್ಪಿಸಿದೆ. ಇದರ ಮಧ್ಯದಲ್ಲಿರುವ ಭಾಗದ ಸ್ಥಳ ಅಶೋಕ್ ಎಂಬವರ ಖಾಸಗಿ ಸ್ವತ್ತಾಗಿದ್ದು, ವಾಹನಗಳ ಪಾರ್ಕಿಂಗ್ ಸೆಂಟರ್ ತೆರೆಯಲಾಗಿದೆ.ಮೆಟ್ರೊ ಪಾರ್ಕಿನ ನಿಲ್ದಾಣಕ್ಕಿಂತಲೂ ಹೆಚ್ಚು ವಸೂಲಿ ಮಾಡುತ್ತಿರುವುದಾಗಿ ವಾಹನ ಸವಾರರು ಆರೋಪಿಸಿದ್ದಾರೆ.

ಒಮ್ಮೊಮ್ಮೆ ಮೆಟ್ರೊ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡಲು ಸ್ಥಳಾವಕಾಶ ಸಿಗುವುದಿಲ್ಲ ಆಗ ವಿಧಿ ಇಲ್ಲದೇ ಖಾಸಗಿಯವರ ವಾವನ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ನಮಗೂ ಖಾಸಗಿಯವರಿಗೂ ಸಂಬಂದವಿಲ್ಲ

ಮೆಟ್ರೋ ಅಧಿಕಾರಿಗಳು ಹೇಳುವಂತೆ ಮಧ್ಯ ಭಾಗದ ಜಾಗಕ್ಕೂ ಮೆಟ್ರೋಗೂ ಸಂಬಂಧವಿಲ್ಲ. ಆದರೆ, ಮಧ್ಯಭಾಗದ ಜಾಗದ ಮಾಲೀಕರು ಎನ್ನಲಾಗಿರುವ ಅಶೋಕ್ ಎನ್ನುವವರು ಈ ಜಾಗವನ್ನು ಬೆಳವಾಡಿ ಎನ್ನುವವರಿಗೆ ಪಾರ್ಕಿಂಗ್ ಉದ್ದೇಶಕ್ಕಾಗಿ ನೀಡಲಾಗಿದೆ ಎನ್ನುತ್ತಾರೆ.ಎರಡರಲ್ಲೂ ಪ್ರತ್ಯೇಕ ಶುಲ್ಕ ಪಡೆಯಲಾಗುತ್ತಿದೆ.

ಯಾವುದೇ ಮಾನದಂಡವಿಲ್ಲ

ಯಲಚೇನಹಳ್ಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಐದು ಪಾರ್ಕಿಂಗ್ ಸೆಂಟರ್ ಗಳಿವೆ. ಅಧಿಕೃತ ಮತ್ತು ಅನಧಿಕೃತ ಎನ್ನುವ ರೇಖೆ ಹೊರತುಪಡಿಸಿದರೆ, ೨ಕಡೆ ಯಾವುದೇ ವ್ಯತ್ಯಾಸವಿಲ್ಲ. ಇಲ್ಲಿನ ಯಾವುದೇ ಸುರಕ್ಷತಾ ಸಾಧನಗಳಿಲ್ಲ. ಭದ್ರತೆಯಿಲ್ಲ.

ನಮ್ಮಿಂದ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ಶುಲ್ಕ ಪಡೆಯುತ್ತಾರೆ ಆದರೂ ನಮ್ಮ ವಾಹನಗಳಿಗೆ ಯಾವುದೇ ಸೂಕ್ತ ಭದ್ರತೆ ಇಲ್ಲ. ಕಳೆದ ಒಂದು ತಿಂಗಳ ಹಿಂದೆ ಸುರೇಶ್ ಎಂಬುವರ ಪಲ್ಸರ್ ದ್ವಿಚಕ್ರ ವಾಹನ ಕಳುವಾಗಿದೆ. ಕಳವಿಗೆ ನಾವು ಜವಾಬ್ದಾರರಲ್ಲ ಎನ್ನುತ್ತಾರೆ ಖಶಗಿ ಮಾಲೀಕರು. ಯಶವಂತಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos