ಮತ ಹಾಕುವುದನ್ನೇ ಮರೆತ ವಿ.ಎಸ್ ಉಗ್ರಪ್ಪ.!

ಮತ ಹಾಕುವುದನ್ನೇ ಮರೆತ ವಿ.ಎಸ್ ಉಗ್ರಪ್ಪ.!

ಬಳ್ಳಾರಿ, ಏ. 19, ನ್ಯೂಸ್ ಎಕ್ಸ್ ಪ್ರೆಸ್: ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ ಎಸ್ ಉಗ್ರಪ್ಪ ಅವರು ತಮ್ಮ ಮತವನ್ನೇ ಚಲಾಯಿಸದೆ ಅಂಥದೊಂದು ಪ್ರಮಾದ ಮಾಡಿದ್ದಾರೆ. ‘ಮತ ಚಲಾಯಿಸಿ’ ಎಂದು ಜನರಲ್ಲಿ ಮನವಿ ಮಾಡುವ, ಅಥವಾ ಸಲಹೆ ನೀಡುವ ಹಕ್ಕನ್ನೇ ಈ ಮೂಲಕ ಅವರು ಕಳೆದುಕೊಂಡಿದ್ದಾರೆ.

ವಿ ಎಸ್ ಉಗ್ರಪ್ಪನವರು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮತದಾನದ ಹಕ್ಕು ಪಡೆದಿದ್ದರು. ಆದರೆ ಬಳ್ಳಾರಿಯಲ್ಲಿ ಸ್ವತಃ ಅಭ್ಯರ್ಥಿಯಾಗಿರುವುದರಿಂದ ಪ್ರಚಾರದ ತಲೆಬಿಸಿಯಲ್ಲಿದ್ದ ಅವರು ಮತದಾನ ಮಾಡುವ ‘ಸಣ್ಣ’ ಕಾರ್ಯಕ್ಕಾಗಿ ಬೆಂಗಳೂರಿನವರೆಗೆ ಯಾಕೆ ಬರಬೇಕು ಎಂದು ಭಾವಿಸಿ, ಮತದಾನವನ್ನೇ ಮಾಡದೆ ಉಳಿದರು.

ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಲೇವಡಿ ವ್ಯಕ್ತವಾಗಿದ್ದು, ಮತದಾರರಲ್ಲಿ ನೀವು ಮತ ಕೇಳುತ್ತಿರಾ? ಎಂದು ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos