ರಮಣೀಯವಾಗಿ ಹರಿಯುತ್ತಿದೆ ಮಗದ ಮಾಸೂರು ಜಲಪಾತ

ರಮಣೀಯವಾಗಿ ಹರಿಯುತ್ತಿದೆ ಮಗದ ಮಾಸೂರು ಜಲಪಾತ

ರಾಣೆಬೆನ್ನೂರು: ರಾಣೆಬೆನ್ನೂರಿನಿಂದ ಸರಿ ಸುಮಾರು ೫೦ ಕಿ.ಮೀ. ದೂರವಿರುವ ಮಾಸೂರಿನ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ಕೆರೆ. ಕೆರೆಯ ಪಕ್ಕದ ಎರಡು ಬೆಟ್ಟಗಳ ನಡುವಿನ ಇಕ್ಕೆಲಗಳ ಮೂಲಕ ಜುಳು ಜುಳು ಹರಿಯುವ ನೀರು, ಸುತ್ತಲೂ ಹಸಿರು ಬೆಟ್ಟಗಳು ತಣ್ಣನೆ ಬಿಸುವ ಗಾಳಿ, ಏಕಾಂಗಿ ಸಂಚಾರ ಎಲ್ಲವೂ ಹೊಸ ಸ್ವರೂಪದ ವಿನೂತನ ಅನುಭವಗಳು.
ಪ್ರಕೃತಿಯ ಮಡಿಲಲ್ಲಿ ಅದ್ಭುತವಾಗಿ ರೂಪಗೊಂಡಿರುವ ಜಲಪಾತ ನೋಡುಗರನ್ನು ಕೈಬೀಸಿ ಕರೆದಂತೆ ರಾಜ ಗಾಂಭೀರ್ಯದಿಂದ ಹರಿಯುವ ಜಲಧಾರೆ ಹೃದಯವನ್ನು ಸೂರೆಗೊಳಿಸುವಂತಹದ್ದು ಇನ್ನು ನೋಡಬೇಕೆನಿಸುವುದು. ಈ ಚಿಕ್ಕ ಜಲಪಾತದ ವೈಭವ ನೋಡಿ ಅಬ್ಬಾ ಎನಿಸುತ್ತದೆ ಹಾಗೂ ರಾಣೆಬೆನ್ನೂರ ಪಕ್ಕದ ಜಲಪಾತ ನೋಡದಿರುವುದು ಏನೋ ಕಳೆದುಕೊಂಡಂತೆ ಎಂದು ಹೇಳಬಹುದು. ಬೆಟ್ಟಗಳು ಕೆರೆಯ ಅದ್ಭುತ ನೋಟ ಎಲ್ಲವೂ ಮನ ತಣಿಸುವುಗಳಾಗಿವೆ
ನಿತ್ಯವೂ ಸಾವಿರಾರು ಜನರು ಭೇಟಿಕೊಡುವ ಈ ಪ್ರದೇಶಕ್ಕೆ ಸರ್ಕಾರದ ನಿರ್ಲಕ್ಷ್ಯ ಅತ್ಯಂತ ಖಂಡನೀಯ. ಸುತ್ತಲು ಕಾಡಿರುವ ಪ್ರದೇಶಕ್ಕೆ ಹೋಗಲು ಸುರಕ್ಷಿತ ರಸ್ತೆ ವ್ಯವಸ್ಥೆ ಇಲ್ಲ. ತಂಗಲು ವಾಸಗೃಹಗಳು, ಸರಿಯಾದ ಸಿಬ್ಬಂದಿ ವ್ಯವಸ್ಥೆ, ಹೋಟೆಲ್‌ಗಳು ಇಲ್ಲದೇ ಇರುವುದು ಈ ಪ್ರದೇಶದ ಬೆಳವಣಿಗೆಗೆ ಹಿನ್ನಡೆಯಾಗಿರುವುದು

ಫ್ರೆಶ್ ನ್ಯೂಸ್

Latest Posts

Featured Videos