ಎಸ್. ಮಾಳಿ ಅವರಿಗೆ ಸಿಎಂ ಪದಕ

ಎಸ್. ಮಾಳಿ ಅವರಿಗೆ ಸಿಎಂ ಪದಕ

ದೇವನಹಳ್ಳಿ , ಅ. 24 : ಮಲ್ಲಿಕಾರ್ಜುನ ಎಸ್ ಮಾಳಿ ಅವರಿಗೆ ಸಿಎಂ ಪದಕ ನೀಡಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಮಾಣ ಪತ್ರ ಪದಕ ನೀಡಿ ಗೌರವಿಸಿದರು. ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ನಡೆದ ಸಮಾರಂಭದಲ್ಲಿ ತಾಲೂಕಿನ ಕೋರಮಂಗಲ ಬಯಲು ಕಾರಾಗೃಹ ಬಯಲು ಬಂಧಿಕಾಣೆ ಮಾದರಿಯನ್ನಾಗಿಮಾಡಿದ ಸಹಾಯಕ ಅಧೀಕ್ಷಕ ಮಲ್ಲಿಕಾರ್ಜುನ್ ಎಸ್ ಮಾಳಿ ಅವರ ಸೇವೆ ಗುರುತಿಸಿ ಮುಖ್ಯಮಂತ್ರಿ ಪದಕವನ್ನು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರಮಾಣ ಪತ್ರ ಹಾಗೂ ಪದಕ ನೀಡಿ ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿದ ನಂತರ ಕಾರಾಗೃಹದ ಸಹಾಯಕ ಅಧೀಕ್ಷಕ ಮಲ್ಲಿಕಾರ್ಜುನ್ ಎಸ್ ಮಾಳಿ ಮಾತನಾಡಿ, ಸ್ವಚ್ಚತೆ ಕಾಪಾಡಿರುವುದು, ಕೈದಿಗಳ ಪರಿವರ್ತನೆಗಾಗಿ ಸಾಮಾಜಿಕ ಕಾರ್ಯಕ್ರಮಗಳ ಆಯೋಜನೆ, ವಿವಿಧ ಸಮಾಜಮುಖಿ ಸಂಸ್ಥೆಗಳ ಸಹಯೋಗದೊಂದಿಗೆ ಕೈದಿಗಳನ್ನು ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಸೇರಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ, ಬಹುತೇಕ ಕೈದಿಗಳು ಮನಸ್ಸು ಪರಿವರ್ತನೆಗೊಂಡಿರುವುದು. ಕಾರಾಗೃಹದಲ್ಲಿನ ಭೂ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳ ಮೂಲಕ ರಾಜ್ಯದ ಖಜಾನೆಗೆ ಉತ್ತಮ ಆರ್ಥಿಕ ಆದಾಯ ಮಾಡಿಕೊಟ್ಟಿರುವುದು ಸೇರಿದಂತೆ ಉತ್ತಮ ಕರ್ತವ್ಯ ನಿರ್ವಹಣೆ ಮೆಚ್ಚಿ, ಮುಖ್ಯಮಂತ್ರಿ ಪದಕವನ್ನು ನೀಡಿ ಗೌರವಿಸಲಾಗಿದೆ. ರಾಗಿ, ತೊಗರಿ, ಬಾಳೆ, ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆದಿರುವುದಲ್ಲದೆ ೨೦ ಹಸುಗಳಿಂದ ಹೈನುಗಾರಿಕೆ , ಕುರಿ, ಕೋಳಿ ಸಾಕಾಣಿಕೆ ಮಾಡಲಾಗುತ್ತಿದೆ. ಸನ್ನಡತೆಯ ಆಧಾರದಲ್ಲಿನ ರಾಜ್ಯದ ವಿವಿಧ ಜೈಲುಗಳಿಂದ ಬಂದಂತಹ ಶಿಕ್ಷೆಗೆ ಒಳಗಾದ ಅಪರಾಧಿ ಗಳಿಗೆ ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಲು ಕೃಷಿ, ಪಶು ಸಂಗೋಪನೆ ಮೊದಲಾದ ಚಟುವಟಿಕೆಗಳನ್ನು ಕಲ್ಪಿಸಿಕೊಡಲಾಗಿದೆ ಎಂದು ಹೇಳಿದರು.ನನ್ನ ಕರ್ತವ್ಯವನ್ನು ಗುರ್ತಿಸಿ ಪದಕಕ್ಕೆ ಆಯ್ಕೆ ಮಾಡಿರುವುದು ಸಂತಸ ತಂದಿರುವುದರ ಜೊತೆಗೆ ನನ್ನ ಕರ್ತವ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲಿಕ್ಕೆ ನನ್ನ ಹೊಣೆಗಾರಿಕೆ ಹೆಚ್ಚಾಗಿದೆ. ಇಲಾಖೆಯ ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಕರ್ತವ್ಯ ನಿರ್ವಹಿಸಿದ್ದರಿಂದ ಪದಕ ಸಿಕ್ಕಿದೆ. ಮುಂದೆಯೂ ಅವರ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸುತ್ತೆನೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos