ಹಳೇಬೀಡಿನಲ್ಲಿ ಕುಸಿದ ಮನೆ

ಹಳೇಬೀಡಿನಲ್ಲಿ ಕುಸಿದ ಮನೆ

ಹಳೇಬೀಡು, ಅ.22 : ಸತತ ಮಳೆಯಿಂದಾಗಿ ಹಳೆಬೀಡಿನ ಅಂಬೇಡ್ಕರ್ ಬಡಾವಣೆಯಲ್ಲಿ ಮನೆಯೊಂದು ಭಾಗಶಃ ಕುಸಿದು ಬಿದ್ದಿದೆ. ಬಡಾವಣೆ ನಿವಾಸಿ ರಾಜು ಎಂಬುವರ ಮನೆಯ ಒಂದು ಭಾಗ ಕುಸಿದಿದೆ. ಗೋಡೆ ಉರುಳಿ ಬಿದ್ದಿರುವ ಜಾಗವನ್ನು ದೇವರ ಕೋಣೆಯಾಗಿ ಉಪಯೋಗಿಸುತ್ತಿದ್ದ ಕಾರಣ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಸುರಿದ ಮಳೆಗೆ ಇದೇ ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದೆ.
ಹಲವು ವರ್ಷಗಳಿಂದ ಮಣ್ಣಿನ ಗೋಡೆಯ ಇದೇ ಮನೆಯಲ್ಲಿ ನಾವು ವಾಸವಾಗಿದ್ದು, ಹಣಕಾಸಿನ ತೊಂದರೆಯಿಂದಾಗಿ ಮನೆಯನ್ನು ನವೀಕರಿಸಲು ಆಗಿರಲಿಲ್ಲ. ಈಗ ಇದ್ದ ಒಂದು ಮನೆಯೂ ಕುಸಿದಿದ್ದು ವಾಸಕ್ಕೆ ಎಲ್ಲಿ ಹೋಗುವುದು ಎಂದು ತಿಳಿಯುತ್ತಿಲ್ಲ. ಆದಷ್ಟು ಬೇಗ ಮನೆ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಸಹಾಯ ಸಿಕ್ಕರೆ ಅನುಕೂಲವಾಗುತ್ತದೆ ಎಂದು ರಾಜು ಅಳಲು ತೋಡಿಕೊಂಡರು. ಮಳೆಯಿಂದ ಹಾನಿಯುಂಟಾಗಿರುವ ಮನೆಯ ಸ್ಥಿತಿಗತಿ ವೀಕ್ಷಿಸಿದ ಶಾಸಕ ಕೆ.ಎಸ್. ಲಿಂಗೇಶ್ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos