ರಿಯಾಯಿತಿ ದರದಲ್ಲಿ ಯಂತ್ರೋಪಕರಣ

ರಿಯಾಯಿತಿ ದರದಲ್ಲಿ ಯಂತ್ರೋಪಕರಣ

ಬೇಲೂರು: ಕೃಷಿಯಲ್ಲಿ ಮಹತ್ತರ ಬದಲಾವಣೆ ತರಬೇಕೆಂಬ ಉದ್ದೇಶದಿಂದ ರೈತರಿಗೆ ರಿಯಾಯಿತಿ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ನೀಡುತ್ತಿದೆ ಎಂದು ಶಾಸಕ ಕೆ.ಎಸ್.ಲಿಂಗೆಶ್ ಹೇಳಿದರು.
ತಾಲೂಕಿನ ಬಿಕ್ಕೋಡು ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆಯಿಂದ ವಿವಿಧ ಸವಲತ್ತುಗಳು ಹಾಗೂ ಯಂತ್ರೋಪಕರಣಗಳ ವಿತರಣೆಮಾಡಿ ಮಾತನಾಡಿದ ಅವರು, ಕೊರೋನಾ ಸಂಕಷ್ಟದ ಸಮಯದಲ್ಲಿ ರೈತರ ಸ್ಥಿತಿ ಮೂರಾಬಟ್ಟೆಯಾಗಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದಲೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಲಿಕಾರ್ಮಿಕರ ಕೊರತೆಯೂ ಹೆಚ್ಚಾಗಿ ಕೃಷಿಚಟುವಟಿಕೆಗೆ ಹಿನ್ನಡೆಯಾಗಿದೆ. ಇದನ್ನು ಮನಗಂಡ ಸರ್ಕಾರ ರಿಯಾಯಿತಿ ದರದಲ್ಲಿ ಕೃಷಿಯಂತ್ರೋಪಕರಣಗಳ ವಿತರಣೆಗೆ ಮುಂದಾಗಿದೆ. ಇದರ ಸದ್ಬಳಕೆ ಆಗಬೇಕಿದೆ ಎಂದು ತಿಳಿಸಿದರು.
ಕೃಷಿ ಇಲಾಖೆ ಅಧಿಕಾರಿ ಪರಮೇಶ್ ಮಾತನಾಡಿ, ಕೊರೋನಾ ಹಿನ್ನಲೆಯಲ್ಲಿ ಐದಾಳು ತಿಂಗಳು ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟಾಗಿತ್ತು. ಆದರೆ ಈಗ ಸಾಮಾಜಿಕ ಅಂತರ ಮತ್ತು ಸರಕಾರ ಮಾರ್ಗಸೂಚಿ ಅನ್ವಯ ಪುನಃ ಕೃಷಿಚಟುವಟಿಕೆಯಲ್ಲಿ ರೈತರು ತೊಡಗಿಕೊಳ್ಳುತ್ತಿದ್ದಾರೆ.
ಬೆಳೆ ಸಮೀಕ್ಷೆ ಆಪ್ ಬಳಕೆಯಲ್ಲಿ ಬೇಲೂರು ತಾಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು. ತಾ.ಪಂ.ಅಧ್ಯಕ್ಷೆ ಇಂದಿರಾರವಿಕುಮಾರ್, ಉಪಾಧ್ಯಕ್ಷೆ ಜಮುನಾಅಣ್ಣಪ್ಪ, ಸದಸ್ಯೆ ತೀರ್ಥಮ್ಮ, ಮಾಜಿ ಅಧ್ಯಕ್ಷೆ ಕಮಲ, ಜಿ.ಪಂ.ಸದಸ್ಯೆ ಲತಾಮಂಜೇಶ್ವರಿ, ಎಪಿಎಂಸಿ ಮಾಜಿ ಅಧ್ಯಕ್ಷ ಚೇತನಕುಮಾರ್ ಪ್ರಮುಖರಾದ ವಿಜಯಲಕ್ಷ್ಮೀ, ರಾಜಶೇಖರ್, ಗಣೇಶ್, ಶಿವಪ್ಪ ಕೃಷಿ ಅಧಿಕಾರಿ ಸುಮಾ, ಪಿಡಿಒ ರಮೇಶ್ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos