ಪುಟ್ಟಮಗುನಲ್ಲಿ ಓಡಿಬಂದ ಬೆಕ್ಕು!

ಪುಟ್ಟಮಗುನಲ್ಲಿ  ಓಡಿಬಂದ ಬೆಕ್ಕು!

ಕೊಲಂಬಿಯಾ, ನ.10 : ಪುಟ್ಟ ಮಗುವೊಂದು ಮನೆಯೊಂದರ ಹಾಲ್ನಲ್ಲಿ ಆಟವಾಡುತ್ತಿತ್ತು. ಅಲ್ಲಿಯೇ ಸ್ವಲ್ಪದೂರದ ಕುರ್ಚಿಯ ಮೇಲೆ ಅವರ ಮನೆಯ ಬೆಕ್ಕು ಕುಳಿತಿತ್ತು. ಆ ಮಗು ಅಂಬೆಗಾಲಿಡುತ್ತ ಮನೆಯ ಬಾಗಿಲವರೆಗೆ ಹೋಯಿತು. ಇನ್ನೇನು ಬಾಗಿಲು ದಾಟುವುದರಲ್ಲಿತ್ತು, ಅಷ್ಟರಲ್ಲಿ ಕುರ್ಚಿಯಿಂದ ಹಾರಿಬಂದ ಬೆಕ್ಕು ಮಗುವನ್ನು ಮನೆಯ ಒಳಗೇ ಸಾವಕಾಶವಾಗಿ ಎಳೆಯಿತು.

ಹೀಗಾಗಿ ಆ ಮಗು ಮತ್ತೆ ಅಂಬೆಗಾಲಿಡುತ್ತ ಒಳಗೇ ಹೋಯಿತು. ಒಮ್ಮೆ ಬೆಕ್ಕು ತಡೆಯದೆ ಇದ್ದರೆ ಆ ಪುಟ್ಟ ಮಗು ಬಾಗಿಲಿನಿಂದ ಈಚೆ ಬಂದು ಮೆಟ್ಟಿಲುಗಳಿಂದ ಕೆಳಗೆ ಬೀಳುತ್ತಿತ್ತು. ಅದರ ಪ್ರಾಣಕ್ಕೇ ಅಪಾಯವಾಗುವ ಸಾಧ್ಯತೆಗಳೂ ಇದ್ದವು.
45 ಸೆಕೆಂಡ್ಗಳ ವಿಡಿಯೋವನ್ನು ಡಿಲೋರ್ ಅಲ್ವಾರೆಜ್ ಎಂಬ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಆಗಿದೆ. ಅದನ್ನು ನೋಡಿದ ನೆಟ್ಟಿಗರು ಸಿಕ್ಕಾಪಟೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.



 

 

ಫ್ರೆಶ್ ನ್ಯೂಸ್

Latest Posts

Featured Videos