ಇನ್ನುಮುಂದೆ ಈರುಳ್ಳಿ ಮಾರಾಟಕ್ಕೂ ಬೇಕು ಲೈಸೆನ್ಸ್

ಇನ್ನುಮುಂದೆ ಈರುಳ್ಳಿ ಮಾರಾಟಕ್ಕೂ ಬೇಕು ಲೈಸೆನ್ಸ್

ಬೆಂಗಳೂರು, ಡಿ. 10: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಗ್ರಾಹಕರು ಪರದಾಡುವಂತಹ ಪರಿಸ್ಥಿತಿ ಯದುರಾಗಿದ್ದು, ಈರುಳ್ಳಿ ಕದ್ದುಕೊಂಡು ಹೋದವರು, ಈರುಳ್ಳಿ ಬೆಳೆಗಾರರಿಗೆ ಭದ್ರತೆಯಂತಹ ವಿಚಿತ್ರ ಸುದ್ದಿಗಳನ್ನು ನಾವು ಕೇಳಿದ್ದೇವೆ. ಆದರೆಮ ಈರುಳ್ಳಿಯ ಬೆಲೆ ದುಬಾರಿಯಾಗಿರುವುದರಿಂದ ಇನ್ನುಮುಂದೆ ಈರುಳ್ಳಿ ಮಾರಾಟಕ್ಕೆ ಲೈಸೆನ್ಸ್ ಪಡೆಯಬೇಕು ಎಂಬ ನಿಯಮವನ್ನು ಮೈಸೂರು ಜಿಲ್ಲಾಧಿಕಾರಿಗಳು ಜಾರಿಗೊಳಿಸಿದ್ದಾರೆ.

ಹೌದು, ಇನ್ನು ಮುಂದೆ ಮೈಸೂರಿನಲ್ಲಿ ಈರುಳ್ಳಿ ಮಾರಾಟ ಮಾಡಬೇಕೆಂದರೆ ಲೈಸೆನ್ಸ್ ಇರಲೇಬೇಕು. ಅಗತ್ಯ ವಸ್ತುಗಳ ಪರವಾನಗಿ ಆದೇಶ 1986(ತಿದ್ದುಪಡಿ 2019)ರ ಪ್ರಕಾರ ಈರುಳ್ಳಿ ಮಾರಾಟಗಾರರು ಲೈಸೆನ್ಸ್ ಪಡೆಯಬೇಕು. ಮೈಸೂರು ನಗರದ ವ್ಯಾಪಾರಿಗಳು ಜಿಲ್ಲಾಧಿಕಾರಿ ಕಚೇರಿಯಿಂದ ಲೈಸೆನ್ಸ್ ಪಡೆದು ಈರುಳ್ಳಿ ಮಾರಾಟ ಮಾಡಬೇಕು. ತಾಲ್ಲೂಕಿನಲ್ಲಿ ತಹಶೀಲ್ದಾರ್ ಕಚೇರಿಯಿಂದ ಲೈಸೆನ್ಸ್ ಪಡೆದು ಮಾರಾಟ ಮಾಡಬೇಕು ಎಂಬ ನಿಯಮ ಇಂದಿನಿಂದಲೇ ಜಾರಿಯಾಗಲಿದೆ.

ಸರ್ಕಾರದ ಆದೇಶದಂತೆ ಈರುಳ್ಳಿ ಸಗಟು ವ್ಯಾಪಾರಿಗಳು 250 ಕ್ವಿಂಟಾಲ್ ಮಾತ್ರ ದಾಸ್ತಾನು ಮಾಡಬೇಕು. ಚಿಲ್ಲರೆ ವ್ಯಾಪಾರಿಗಳು 50 ಕ್ವಿಂಟಾಲ್ ಈರುಳ್ಳಿಯನ್ನು ದಾಸ್ತಾನು ಮಾಡಬೇಕು. ಲೈಸೆನ್ಸ್ ಇಲ್ಲದೆ ಅದಕ್ಕಿಂತ ಹೆಚ್ಚಿನ ಈರುಳ್ಳಿ ದಾಸ್ತಾನು ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿಯಿಂದ ಆದೇಶ ಹೊರಡಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos