ನಿಂಬೆ ರಸದಿಂದ ನಮ್ಮ ಸೌಂದರ್ಯ ವೃದ್ದಿಯಾಗುತ್ತದೆ

ನಿಂಬೆ ರಸದಿಂದ ನಮ್ಮ ಸೌಂದರ್ಯ ವೃದ್ದಿಯಾಗುತ್ತದೆ

ಬೆಂಗಳೂರು: ನಮ್ಮ ಇತ್ತೀಚಿನ ಜೀವನದಲ್ಲಿ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ದೊಡ್ಡ ಸಮಸ್ಯೆಯಾಗಿದೆ. ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕಳಾಗಲಿ ತಮ್ಮ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ. ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಲವಾರು ರೀತಿಯ ಕೆಮಿಕಲ್ ಗಳನ್ನು ಬಳಸುತ್ತಾರೆ. ಇದರಿಂದ ನಮ್ಮ ಚರ್ಮಕ್ಕೆ ಹಾನಿ ಉಂಟಾಗುತ್ತದೆ. ನಮ್ಮ ಮನೆಯಲ್ಲಿ ಸಿಗುವಂತಹ ಪದಾರ್ಥಗಳಲ್ಲಿ ನಮ್ಮ ಸೌಂದರ್ಯವನ್ನು ನಾವು ಹೆಚ್ಚಿಸಿಕೊಳ್ಳಬಹುದು.
ನಿಂಬೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಅದ್ಭುತ ಪವಾಡ ಮಾಡುತ್ತದೆ. ಆದರೆ ಸರಿಯಾಗಿ ಬಳಸಿದರೆ ಯಾವುದೇ ತೊಂದರೆಗಳಿಲ್ಲ. ಇದು ಹೆಚ್ಚು ಬ್ಲೀಚಿಂಗ್ ಏಜೆಂಟ್‌ಗಳನ್ನು ಹೊಂದಿರುತ್ತದೆ. ಅದಕ್ಕಾಗಿಯೇ ಚರ್ಮದ ಮೇಲೆ ನೇರವಾಗಿ ಬಳಿಯಬಾರದು. ಆದರೆ ಇತರ ವಸ್ತುಗಳೊಂದಿಗೆ ಬಳಸಬಹುದು. ನೇರವಾಗಿ ಬಳೆದುಕೊಂಡರೆ ತುರಿಕೆ, ದದ್ದು, ಚರ್ಮದ ಅಲರ್ಜಿ, ತ್ವಚೆಯಲ್ಲಿ ಕಪ್ಪಾಗುವುದು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕೆಲವರು ತಮಗೆ ಗೊತ್ತಿಲ್ಲದೆಯೇ ಸಮಸ್ಯೆಗಳನ್ನು ನೇರವಾಗಿ ಆಹ್ವಾನಿಸುತ್ತಾರೆ. ನಿಂಬೆ ರಸವನ್ನು ಯಾವಾಗಲೂ ಕೆಲವು ಪದಾರ್ಥಗಳೊಂದಿಗೆ ಮಾತ್ರ ಬೆರೆಸಬೇಕು. ತ್ವಚೆಯ ಮೇಲೆ ನೇರವಾಗಿ ನಿಂಬೆಹಣ್ಣನ್ನು ಹಚ್ಚುವುದರಿಂದ ಸನ್ ಬರ್ನ್ ಪರಿಣಾಮ ಹೆಚ್ಚಾಗುತ್ತದೆ. ಇದರಿಂದ ಮುಖ ಕೆಂಪಾಗಿ ತುರಿಕೆಯಾಗುತ್ತದೆ.
ನಿಂಬೆ ರಸವನ್ನು ಇತರ ವಸ್ತುಗಳ ಸಂಯೋಜನೆಯಲ್ಲಿ ಬಳಸಬಹುದು. ಇದನ್ನು ಜೇನುತುಪ್ಪ, ಮೊಸರು, ಶ್ರೀಗಂಧ, ಬೇಳೆ ಹಿಟ್ಟು, ಅಕ್ಕಿ ಹಿಟ್ಟು ಇತ್ಯಾದಿಗಳೊಂದಿಗೆ ಬೆರೆಸಬಹುದು. ಇದರಿಂದ ಚರ್ಮದ ಸಮಸ್ಯೆಗಳು ಬರುವುದಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos