ಲಂಕೇಶ್ ಹತ್ಯೆ ಪ್ರಕರಣ ಆರೋಪಿ ಪತ್ತೆ

ಲಂಕೇಶ್ ಹತ್ಯೆ ಪ್ರಕರಣ ಆರೋಪಿ ಪತ್ತೆ

ಬೆಂಗಳೂರು, ಜು.18 : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಪ್ರಮುಖ ಆರೋಪಿ ಹಿರಿಯ ಸಂಶೋಧಕ, ಪ್ರಗತಿಪರ ಚಿಂತಕ ಎಂಎಂ ಕಲ್ಬುರ್ಗಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದವನು ಪತ್ತೆಯಾಗಿದೆ. ಹುಬ್ಬಳ್ಳಿ ಗಂಧದ ಕಡ್ಡಿ ವ್ಯಾಪಾರಿ ಗಣೇಶ್ ಮಿಸ್ಕಿನ್, ಕೆಲ ಹಿಂದೂ ಮೂಲಭೂತ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದು, ಧಾರವಾಡದಲ್ಲಿ ನಿನ್ನೆ ನಡೆದ ಪರೇಡ್ ನಲ್ಲಿ ಕಲ್ಬುರ್ಗಿ ಅವರ ಪತ್ನಿ ಉಮಾದೇವಿ ಹಾಗೂ ಮತ್ತೊಬ್ಬ ಪ್ರತ್ಯಕ್ಷದರ್ಶಿ ಈತನನ್ನು ಗುರುತಿಸಿದ್ದಾರೆ.ಮಿಸ್ಕನ್ ನೋಡಿದ ಕೂಡಲೇ ಉಮಾದೇವಿ ಕುಸಿದು ಬಿದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
2015 ಆಗಸ್ಟ್ 30 ರಂದು ಬೆಳಗ್ಗೆ ಮಿಸ್ಕಿನ್ ನನ್ನು ಉಮಾದೇವಿ ನೋಡಿದ್ದಾರೆ. ಆತ ಬಾಗಿಲು ಬಡಿದಾಗ ಉಮಾದೇವಿ ಬಾಗಿಲು ತೆರೆದಿದ್ದಾರೆ. ಆಗ ಮಿಸ್ಕಿನ್ ಪ್ರೋಫೆಸರ್ ಕಲ್ಬುರ್ಗಿ ಅವರನ್ನು ಕೇಳಿದ್ದಾನೆ. ನಂತರ ಅವರು ಬಾಗಿಲ ಬಳಿ ಬಂದಾಗ ಮಿಸ್ಕಿನ್ 7.65 ಎಂಎಂ ಪಿಸ್ತೂಲ್ ನಿಂದ ಕಲ್ಬುರ್ಗಿ ಹಣೆಗೆ ಗುಂಡು ಹೊಡೆದಿದ್ದಾನೆ. ಆದೇ ಪಿಸ್ತೂಲ್ ನ್ನು ಸೆಪ್ಟೆಂಬರ್ 5, 2017ರಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆಯಲ್ಲೂ ಬಳಸಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos