ಲಾಲ ಬಹುದ್ದೂರ್ ಶಾಸ್ತ್ರೀ ಜಲಾಶಯದಲ್ಲಿ ಭಾರೀ ನೀರು

ಲಾಲ ಬಹುದ್ದೂರ್ ಶಾಸ್ತ್ರೀ ಜಲಾಶಯದಲ್ಲಿ ಭಾರೀ ನೀರು

ಬಾಗಲಕೋಟೆ, ಆ. 3 : ಆಲಮಟ್ಟಿ ಅಣೆಕಟ್ಟಿನಿಂದ 40 ಕಿಲೋ ಮೀಟರ್ ದೂರದಲ್ಲಿರುವ ನಾರಾಯಣಪುರ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಪಶ್ಚಿಮ ಘಟ್ಟ ಮತ್ತು ಕೃಷ್ಣಾ ನದಿ ಜಲಾನಯದ ಪ್ರದೇಶಗಳಲ್ಲಿ ಭಾರೀ ಮಳೆ ಹಿನ್ನಲೆ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ(ಆಲಮಟ್ಟಿ ಅಣೆಕಟ್ಟು) ದಲ್ಲಿ ನೀರಿನ ಒಳ ಹರಿವು ಹೆಚ್ಚಾಗಿದೆ.
ನಿನ್ನೆ ಕೃಷ್ಣಾ ಜಲ ಭಾಗ್ಯ ನಿಗಮ ನಿಯಮಿತದ ಅಧಿಕಾರಿಗಳು ಅಣೆಕಟ್ಟಿಗೆ 2 ಲಕ್ಷದ 5 ಸಾವಿರದ 832 ಕ್ಯೂಸೆಕ್ ನೀರು ಹರಿದು ಬಂದಿದ್ದು ಹೊರಹರಿವು 2 ಲಕ್ಷದ 30 ಸಾವಿರದ 207 ಕ್ಯೂಸೆಕ್ಸ್ ದಾಖಲಾಗಿತ್ತು ಎಂದಿದ್ದಾರೆ. ಕಳೆದ ಮೂರು ದಿನಗಳಲ್ಲಿ ಜಲಾಶಯದ ಎಲ್ಲಾ 26 ಕ್ರೆಸ್ಟ್ ಗೇಟ್ ಗಳಿಂದ ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos