ಸಿಲಿಕಾನ್‌ಸಿಟಿಯಲ್ಲಿ ಕುರುಕ್ಷೇತ್ರ ನಾಟಕ

ಸಿಲಿಕಾನ್‌ಸಿಟಿಯಲ್ಲಿ ಕುರುಕ್ಷೇತ್ರ ನಾಟಕ

ಬೆಂಗಳೂರು, ಫೆ. 22: ಆಧುನಿಕ  ಕಾಲದ ಭರಾಟೆಯಲ್ಲಿ ನಾಟಕಗಳು ಮಾಯವಾಗುತ್ತಿವೆ. ಇಂತಹ ಸಂದರ್ಭದಲ್ಲೂ ರಾಜ್ಯದಲ್ಲಿ ಇಂದಿಗೂ ನಾಟಕಗಳು ಅದರಲ್ಲೂ ಪೌರಾಣಿಕ ನಾಟಕಗಳು ಜೀವಂತವಾಗಿರುವುದು ಸಾಕಷ್ಟು ಹೆಮ್ಮೆಯ ಸಂಗತಿಯಾಗಿದೆ. ಪಾಶ್ಚಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ನಾಡಿನ ಸಂಸ್ಕೃತಿಗೆ ವಿದಾಯ ಹೇಳುವ ಸಂದರ್ಭದಲ್ಲಿ ಸಿಲಿಕಾನ್‌ಸಿಟಿಯಲ್ಲಿ ಹಬ್ಬ ಹರಿದಿನಗಳಲ್ಲಿ ಪ್ರದರ್ಶನ ಗೊಳ್ಳೂತ್ತಿರುವುದು ಮೆಚ್ಚುವ ಸಂಗತಿಯಾಗಿದೆ.

ಬಣ್ಣದ ಲೋಕದಲ್ಲಿ ತೇಲಾಡುತ್ತಿರುವ ಜನರು ದೃಶ್ಯ ಮಾಧ್ಯಮದಲ್ಲಿ ಅವೆಲ್ಲವನ್ನು ನೊಡಿ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಹಿರಿಯರು ತಮ್ಮ ಕಲೆಯಾಗಿ ನಾಟಕಗಳನ್ನು ಮೈಗೂಡಿಸಿಕೊಂಡು ತಮ್ಮ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಆದರೆ ನಾಟಕಗಳಿಗೆ ಯಾರು ಕಿವಿಗೊಡದಿರುವುದು ವಿಪರ್ಯಾಸವೇ ಸರಿ.

ಇಂತಹ ಸಂದರ್ಭದಲ್ಲಿ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನ ಅಗರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಡಾ. ರಾಜ್‌ಕುಮಾರ್ ಕನ್ನಡ ಕಸ್ತೂರಿ ವೇದಿಕೆವತಿಯಿಂದ ಪೌರಾಣಿಕ ನಾಟಕವಾದ ಕುರುಕ್ಷೇತ್ರ ನಾಟಕವನ್ನು ಹಮ್ಮಿಕೊಳ್ಳಲಾಗಿತ್ತು.

ಇನ್ನು ಕಲಾವಿದ ತಿಮ್ಮಾರೆಡ್ಡಿಅವರು ಶ್ರೀಕೃಷ್ಣ ಪಾತ್ರದಾರಿಯಾಗಿ ಸುಮಾರು 20 ವರ್ಷಗಳಿಂದ ಅಭಿನಯ ಮಾಡಿಕೊಂಡು ಬಂದಿದ್ದಾರೆ. ಅದೇ ರೀತಿ ದುರ್ಯೋದನನಾಗಿ ಗುರುವಾರೆಡ್ಡಿ, ಅರ್ಜುನನ ಪಾತ್ರದಾರಿಯಾಗಿ ಗಂಗಾಧರರೆಡ್ಡಿ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸುವ ಮೂಲಕ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ್ದಾರೆ. ಸುಮಾರು 20 ವರ್ಷಗಳಿಂದ ಅಗರದಲ್ಲಿ ಸುಮಾರು 20ಕ್ಕೂ ಹೆಚ್ಚು ಕಲಾವಿದರು ಪ್ರತಿವರ್ಷವೂ ಸಹಾ ನಾಟಕವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕಲಾವಿದರಿಗೆ ನಾಟಕ ಮಾಡಲು ಸಂಘ ಸಂಸ್ಥೆಗಳು, ಸಾರ್ವಜನಿಕರು, ನೆರೆಹೊರೆಯವರು ಸಹಕಾರವನ್ನು ನೀಡುತ್ತಾ ಬಂದಿದ್ದಾರೆ.

ಇನ್ನು ನಾಟಕದ ಬಗ್ಗೆ ಪಾತ್ರದಾರಿಗಳು ಮಾತನಾಡಿ, ಅಗರ ಬಡಾವಣೆಯೂ ದೇವಾಲಯಗಳ ನಾಡಾಗಿದ್ದು, ಕಲೆಗಳ ಬೀಡಾಗಿದೆ. ಪೂರ್ವಜನರ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ನಾಟಕಗಳನ್ನು ನಡೆಸಿಕೊಂಡು ಬರಲಾಗುತ್ತದೆ. ಕೇವಲ ಕುರುಕ್ಷೇತ್ರವಲ್ಲದೆ, ಸಂಪೂರ್ಣ ರಾಮಾಯಣ, ಮಹಾಭಾರತ, ಶನೇಶ್ವರ ಕಥಾನಕ, ಇದರ ಜೊತೆಗೆ ಯಕ್ಷಗಾನವನ್ನು ಸಹಾ ಮಾಡಿಕೊಂಡು ಬರುತ್ತಿದ್ದೇವೆಂದರು.

ಕುರುಕ್ಷೇತ್ರ ನಾಟಕವು ಸಂಜೆ ಪ್ರಾರಂಭವಾಗಿ ಮುಂಜಾನೆ 5 ಗಂಟೆತನಕ ಸಾಂಗವಾಗಿ ಪ್ರದರ್ಶನ ಕಂಡಿತು. ಸಾವಿರಾರು ಸಾರ್ವಜನಿಕರು ಸಹಾ ಸಾವಧಾನವಾಗಿ ಕುಳಿತು ನಾಟಕವನ್ನು ವೀಕ್ಷಿಸಿದರು. ನಾಟಕದಲ್ಲಿ ಪಾತ್ರದಾರಿಗಳು ನುರಿತರಾಗಿದ್ದು, ಪಾತ್ರಗಳಿಗೆ ತಕ್ಕಂತೆ ವೇಷಭೂಷಣವೂ ಸಹಾ ಕಂಗೊಳಿಸಿತ್ತು. ಅದರಲ್ಲೂ ಮಹಿಳಾ ಪಾತ್ರಗಳು ಸಹಾ ಅಚ್ಚುಕಟ್ಟಾಗಿ ಮೂಡಿಬಂದಿದೆ. ಮಾತಿನ ಶೈಲಿ, ನೃತ್ಯ, ಸಂಭಾಷಣೆ, ಕುಚೇಷ್ಟೆ ಎಲ್ಲವೂ ಸಹಾ ಮೂಡಿಬಂದಿದ್ದು ವಿಶೇಷವಾಗಿತ್ತು.

 

ಫ್ರೆಶ್ ನ್ಯೂಸ್

Latest Posts

Featured Videos