‘ಕುಬೇರ’ ಆಟೋ ಚಾಲಕ ಸುಬ್ರಮಣಿಯ ರೋಚಕ ಕಹಾನಿ!

‘ಕುಬೇರ’ ಆಟೋ ಚಾಲಕ ಸುಬ್ರಮಣಿಯ ರೋಚಕ ಕಹಾನಿ!

ಬೆಂಗಳೂರು, ಮೇ.2, ನ್ಯೂಸ್ ಎಕ್ಸ್ ಪ್ರೆಸ್: ಆಟೋ ಚಾಲಕನ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕ ಸುಬ್ರಮಣಿ ಹೇಗೆ ಶ್ರೀಮಂತನಾದ ಎಂಬ ರೋಚಕ ಕಥೆ ಬೆಳಕಿಗೆ ಬಂದಿದೆ‌‌. ಕಳೆದ ಎಂಟು ವರ್ಷಗಳ ಹಿಂದೆ ಆಟೋ ಓಡಿಸುತ್ತಿದ್ದ ಸುಬ್ರಮಣಿ ಎಂಬಾತ ವೈಟ್ ಫೀಲ್ಡ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ವೈಟ್ ಫೀಲ್ಡ್​ಗೆ ಬಂದಿಳಿದಿದ್ದ ವಿದೇಶಿ ಮಹಿಳೆಯೊಬ್ಬರನ್ನು ಸುಬ್ರಮಣಿ ತನ್ನ ಆಟೋದಲ್ಲಿ ವಿಲ್ಲಾಗೆ ಕರೆದುಕೊಂಡು ಬಂದು ಬಿಟ್ಟಿದ್ದ. ಈ ವೇಳೆ ಸುಬ್ರಮಣಿ, ತನ್ನ ಮಾತು, ನಡುವಳಿಕೆಯಿಂದ ಮಹಿಳೆಯ ಮನ ಗೆದ್ದಿದ್ದ. ಇದಾದ ನಂತರ ಆ ಮಹಿಳೆ ಎಲ್ಲಾ ಕೆಲಸಗಳಿಗೂ ಇದೇ ಸುಬ್ರಮಣಿಯನ್ನು ಕರೆದುಕೊಂಡು ಹೋಗ್ತಿದ್ಲು. ಏಕಾಂಗಿಯಾಗಿದ್ದ ವಿದೇಶಿ ಮಹಿಳೆ, ಕುಟುಂಬ ಸಮೇತ ಸುಬ್ರಮಣಿಯನ್ನು ತನ್ನ ಮನೆಯಲ್ಲೇ ಇರುವಂತೆ ಸೂಚಿಸಿ, ವಿಲ್ಲಾವನ್ನು ಆತನ ಹೆಸರಿಗೆ ಬರೆದು ಹೋಗಿದ್ದಾಳೆ. ಸದ್ಯ ಆ ವಿದೇಶಿ ಮಹಿಳೆಗೆ 80 ವರ್ಷ ವಯಸ್ಸಾಗಿರಬಹದು ಅಂತಾ ಸ್ಥಳೀಯರಿಂದ ಮಾಹಿತಿ ದೊರೆತಿದೆ. ಈಗಲೂ ಎರಡು ಆಟೋಗಳನ್ನ ಬಾಡಿಗೆಗೆ ನೀಡಿರುವ ಸುಬ್ರಮಣಿ, ಎರಡು ಕಾರುಗಳು ಹೊಂದಿದ್ದಾನೆ. ಒಂದು ಕಾರು ಸ್ವಂತಕ್ಕೆ, ಮತ್ತೊಂದು ಕಾರು ಬಾಡಿಗೆಗೆ ಬಿಟ್ಟಿದ್ದಾನೆ. ಮತ್ತೊಂದೆಡೆ ಕೆಲ ಮೂಲಗಳ ಮಾಹಿತಿ ಪ್ರಕಾರ ಇದೇ ಆಟೋ ಡ್ರೈವರ್ ಸುಬ್ರಮಣಿ, 2017ರಲ್ಲಿ ಮಾಜಿ ಉಪ ರಾಷ್ಟ್ರಪತಿಯ ಹಿರಿಯ ಮಗ ದಾಸಪ್ಪ ಜತ್ತಿ ಮತ್ತು ಪತ್ನಿ ಲಕ್ಷ್ಮಿ ಡಿ. ಜತ್ತಿ ವಿರುದ್ಧ ಸೈಟ್ ವಿವಾದವೊಂದರ ಸಂಬಂಧ ವೈಟ್ ಫೀಲ್ಡ್ ಠಾಣೆಯಲ್ಲಿ ದೂರು ಕೊಟ್ಟಿದ್ದನಂತೆ. ಈಗ ಜತ್ತಿ ಕುಟುಂಬವೇ ಐಟಿಗೆ ದೂರು ನೀಡಿದೆ ಎಂದು ಆಟೋ ಡ್ರೈವರ್ ಆರೋಪ ಮಾಡಿದ್ದಾನೆ. ಒಟ್ಟಾರೆ ವಿಲ್ಲಾ ಬಗ್ಗೆ ಒಂದೊಂದು ವಿಚಾರ ಬೆಳಕಿಗೆ ಬರುತ್ತಿದ್ದು, ಈತ ಹಲವಾರು ಸಿನಿಮಾ ದಿಗ್ಗಜರು, ರಾಜಕಾರಣಿಗಳ ಜೊತೆ ಫೋಟೋ ತೆಗೆಸಿಕೊಂಡಿರುವುದು ವೈರಲ್ ಆಗಿದೆ. ಸದ್ಯ ವಿಲ್ಲಾ ಖರೀದಿ ಬಗ್ಗೆ ಸೂಕ್ತ ದಾಖಲೆಗಳನ್ನ ನೀಡುವಂತೆ ಐಟಿ ಇಲಾಖೆ ನೋಟಿಸ್ ನೀಡಿದೆ.

ಫ್ರೆಶ್ ನ್ಯೂಸ್

Latest Posts

Featured Videos