ಸಿಂಪಲ್ಲಾಗಿ ಬರ್ತ್​ಡೇ ಆಚರಿಸಿಕೊಂಡ ಕೆಎಲ್​ ರಾಹುಲ್

ಸಿಂಪಲ್ಲಾಗಿ ಬರ್ತ್​ಡೇ ಆಚರಿಸಿಕೊಂಡ ಕೆಎಲ್​ ರಾಹುಲ್

ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟರ್, ಕನ್ನಡಿಗ ಕೆಎಲ್ ರಾಹುಲ್ ಅವರು ನಿನ್ನೆ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಸದ್ಯ ಅವರು ಐಪಿಎಲ್​ನಲ್ಲಿ ಲಖ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ತಂಡದ ಜೊತೆ ಅವರು ಬರ್ತ್​ಡೇ ಆಚರಿಸಿಕೊಂಡಿದ್ದಾರೆ.

ಲಖ್ನೋ ಸೂಪರ್ ಜೈಂಟ್ಸ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ರಾಹುಲ್​ಗಾಗಿ ನಾನಾ ರೀತಿಯ ಕೇಕ್​ಗಳನ್ನು ಇಡಲಾಗಿತ್ತು. ಸಿಂಪಲ್ ಆಗಿ ಆಗಮಿಸಿದ ಅವರು ಇತರ ಆಟಗಾರರ ಜೊತೆ ಕೇಕ್ ಕತ್ತರಿಸಿದರು. ಈ ವೇಳೆ ಎಲ್ಲರೂ ರಾಹುಲ್ ಮುಖಕ್ಕೆ ಕೇಕ್ ಹಚ್ಚೋಕೆ ಆರಂಭಿಸಿದರು. ಆ ಬಳಿಕ ಮೈಗೆಲ್ಲ ಕೇಕ್ ಮೆತ್ತಲಾಯಿತು. ರಾಹುಲ್​ಗೆ ಈಗ 32 ವರ್ಷ ತುಂಬಿದೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

ರಾಹುಲ್ ಅವರು ಬರ್ತ್​ಡೇ ದಿನವೂ ಪ್ರ್ಯಾಕ್ಟಿಸ್ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರು ಎದುರಿಸಲಿದ್ದಾರೆ. ಆಡಿದ ಆರು ಪಂದ್ಯಗಳಲ್ಲಿ ನಾಲ್ಕು ಮ್ಯಾಚ್​ಗಳನ್ನು ಚೆನ್ನೈ ಗೆದ್ದಿದೆ. ಲಖನೌ ಆಡಿದ ಆರು ಪಂದ್ಯಗಳಲ್ಲಿ ಮೂರನ್ನು ಮಾತ್ರ ಗೆದ್ದಿದೆ. ಹೀಗಾಗಿ, ಚೆನ್ನೈ ವಿರುದ್ಧ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಅವರಿಗೆ ಇದೆ.

 

ಫ್ರೆಶ್ ನ್ಯೂಸ್

Latest Posts

Featured Videos