ಕೆಕೆಆರ್ ವಿರುದ್ದ ಪಂಜಾಬ್ ಅಬ್ಬರ

ಕೆಕೆಆರ್ ವಿರುದ್ದ ಪಂಜಾಬ್ ಅಬ್ಬರ

ಬೆಂಗಳೂರು: ಐಪಿಎಲ್‌ 2024ರ 17ನೇ ಆವೃತ್ತಿಯ 42ನೇ ಪಂಡ್ಯದಲ್ಲಿ ಪಂಜಾಬ್ ಕಿಂಗ್ಸ್‌ ಹಾಗೂ ಕೆಕೆಆರ್‌ ತಂಡಗಳು ಈಡನ್‌ ಗಾರ್ಡನ್‌ನಲ್ಲಿ ಈ ತಂಡಗಳು ಮುಖಾಮುಖಿಯಾಗಿತ್ತು. ಈಡನ್‌ ಗಾರ್ಡನ್‌ನಲ್ಲಿ ರನ್‌ ಗಳ ಸುರಿಮಳೆ ಹರಿದು ಬಂದಿದೆ.

ಈ ಐಪಿಎಲ್‌ನಲ್ಲಿ ಬೌಲರ್‌ಗಳಿಗೆ ಬೆಲೆಯೇ ಇಲ್ಲ ಎಂಬುದನ್ನು ಮತ್ತೆ ಸಾಬೀತುಪಡಿಸುವಂತೆ ಆರ್ಭಟಿಸಿದ ಕೋಲ್ಕತಾ 6 ವಿಕೆಟ್‌ಗೆ 261 ರನ್‌ ದೋಚಿತು. ಇಷ್ಟು ದೊಡ್ಡ ಮೊತ್ತವನ್ನು ಪಂಜಾಬ್‌ ಬೆನ್ನತ್ತುವುದು ಕನಸಿನ ಮಾತಾಗಿತ್ತು. ಆದರೆ ಅದನ್ನು ಪಂಜಾಬ್‌ ಬ್ಯಾಟರ್‌ಗಳು ಹುಸಿಗೊಳಿಸಿದರು. ಇನ್ನೂ 10 ಎಸೆತ ಇರುವಂತೆಯೇ 8 ವಿಕೆಟ್‌ಗಳಿಂದ ಗೆದ್ದ ಪಂಜಾಬ್‌, ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿತು.

ಇದನ್ನೂ ಓದಿ : ಆರ್‌ಸಿಬಿ ಅಬ್ಬರಕ್ಕೆ ತತ್ತರಿಸಿದ ಹೈದರಾಬಾದ್‌

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಕೆಕೆಆರ್‌ ತಂಡ ಆರಂಭಿಕ ಬ್ಯಾಸ್‌ ಮ್ಯಾನ್‌ ಪಂಜಾಬ್ ಕಿಂಗ್ಸ್‌ ಬೌಲರ್ಗಳನ್ನು ಎಡೆಮುಡಿ ಕಟ್ಟಿದರು. ಈಡನ್‌ ಗಾರ್ಡನ್‌ನಲ್ಲಿ ಹರಿದ ರನ್‌ ಹೊಳೆಯಲ್ಲಿ ಪಂಜಾಬ್ ಕಿಂಗ್ಸ್‌ ತಂಡ ಕೋಲ್ಕತಾ ನೀಡಿದ 262 ರನ್‌ಗಳ ಹಿಮಾಲಯದೆತ್ತರದ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿ ಗೆದ್ದಿದೆ. ಇದು ಐಪಿಎಲ್‌ ಜೊತೆಗೆ ಟಿ20 ಕ್ರಿಕೆಟ್‌ನಲ್ಲೇ ಗರಿಷ್ಠ ರನ್‌ ಚೇಸ್‌ ದಾಖಲೆ.

ಪಂಜಾಬ್‌ ಬೌಲರ್‌ಗಳ ಮೇಲೆ ಕೆಕೆಆರ್‌ ಬ್ಯಾಟರ್‌ಗಳು ಸವಾರಿ ಮಾಡಿದರು. ಪವರ್‌ಪ್ಲೇನಲ್ಲೇ ತಂಡ 76 ರನ್‌ ಸಿಡಿಸಿದರು. ಆರಂಭಿಕರಾದ ಸುನಿಲ್‌ ನರೈನ್‌ 32 ಎಸೆತದಲ್ಲಿ 71, ಫಿಲ್‌ ಸಾಲ್ಟ್‌ 37 ಎಸೆತಗಳಲ್ಲಿ 75 ರನ್‌ ಸಿಡಿಸಿದರು. ಬಳಿಕ ವೆಂಕಟೇಶ್‌ 39, ಶ್ರೇಯಸ್‌ 28, ರಸೆಲ್‌ 24 ರನ್‌ ಸಿಡಿಸಿ ತಂಡವನ್ನು 250ರ ಗಡಿ ದಾಟಿಸಿದರು.

ಆರ್‌ಸಿಬಿ ಅಬ್ಬರಕ್ಕೆ ತತ್ತರಿಸಿದ ಹೈದರಾಬಾದ್‌ – News Express

ಮೊದಲ ಓವರ್‌ನಿಂದಲೇ ಕೆಕೆಆರ್‌ ಬೌಲರ್‌ಗಳನ್ನು ಚೆಂಡಾಡಲು ಆರಂಭಿಸಿದ ಪ್ರಭ್‌ಸಿಮ್ರನ್‌-ಜಾನಿ ಬೇರ್‌ಸ್ಟೋಬ್‌ ಪವರ್‌ಪ್ಲೇನಲ್ಲಿ 93 ರನ್‌ ದೋಚಿದರು. ಈ ಹಂತದಲ್ಲಿ ಪ್ರಭ್‌ಸಿಮ್ರನ್‌ 20 ಎಸೆತದಲ್ಲಿ 54 ರನ್‌ ಸಿಡಿಸಿ ಔಟಾದರು. ರೋಸ್ಸೌ 26ಕ್ಕೆ ವಿಕೆಟ್‌ ಒಪ್ಪಿಸಿದ ಬಳಿಕ 3ನೇ ವಿಕೆಟ್‌ಗೆ ಜಾನಿ ಜೊತೆಯಾದ ಶಶಾಂಕ್‌ ಸಿಂಗ್ ತಂಡವನ್ನು 18.4 ಓವರಲ್ಲೇ ಗುರಿ ಮುಟ್ಟಿಸಿದರು. ಬೇರ್‌ಸ್ಟೋವ್‌ 48 ಎಸೆತದಲ್ಲಿ 8 ಬೌಂಡರಿ, 9 ಸಿಕ್ಸರ್‌ನೊಂದಿಗೆ 108 ರನ್‌ ಚಚ್ಚಿದರೆ, ಶಶಾಂಕ್‌ 29 ಎಸೆತದಲ್ಲಿ 2 ಬೌಂಡರಿ, 8 ಸಿಕ್ಸರ್‌ ಒಳಗೊಂಡ 68 ರನ್‌ ಸಿಡಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos